ಬುಲೆಟ್ ಢಿಕ್ಕಿ: ಪಾದಚಾರಿ ಮೃತ್ಯು
ಬ್ರಹ್ಮಾವರ, ಮಾ.9: ಬುಲೆಟ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೇರೂರು ಗ್ರಾಮದ ಸುಪ್ರೀಮ್ ಫೀಡ್ಸ್ ಫ್ಯಾಕ್ಟರಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾ.9ರಂದು ಮಧ್ಯಾಹ್ನ 12:30ರ ಸುಮಾರಿಗೆ ನಡೆದಿದೆ.
ಮೃತರನ್ನು ಗೋವಿಂದ ದೇವಾಡಿಗ(65) ಎಂದು ಗುರುತಿಸಲಾಗಿದೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬುಲೆಟ್, ರಸ್ತೆಯ ಅಂಚಿನಲ್ಲಿ ದಾಟಲು ನಿಂತಿದ್ದ ಗೋವಿಂದ ದೇವಾಡಿಗ ಅವರಿಗೆ ಢಿಕ್ಕಿ ಹೊಡೆ ಯಿತ್ತೆನ್ನಲಾಗಿದೆ. ಬಳಿಕ ಬುಲೆಟ್ ಹತೋಟಿ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತು.
ಇದರಿಂದ ಬುಲೆಟ್ ಸವಾರ ಹಾಗೂ ಗೋವಿಂದ ಗಾಯಗೊಂಡಿದ್ದು, ಇವರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಗೋವಿಂದ ದೇವಾಡಿಗ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





