ಗಾಂಜಾ ಸೇವನೆ: ಮೂವರು ವಶಕ್ಕೆ
ಉಡುಪಿ, ಮಾ.9: ಗಾಂಜಾ ಸೇವನೆಗೆ ಸಂಬಂಧಿಸಿ ಉಡುಪಿ ಸೆನ್ ಅಪರಾಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಾ.7ರಂದು ಮಣಿಪಾಲ ವಿದ್ಯಾರತ್ನ ನಗರದ ಆದಿತ್ಯಪರ್ವ ಅಪಾರ್ಟ್ ಮೆಂಟ್ ಬಳಿ ಮುಂಬೈಯ ಆಕಾಶ್ ಅಶ್ವಿನ್ ಠಾಕೂರ್(20) ಮತ್ತು ಗುಜರಾತಿನ ರೋಹಿತ್ ಬಾಲಚಂದ್ರನ್(20) ಹಾಗೂ ಮಾ.8ರಂದು ಉಡುಪಿ ಪುತ್ತೂರು ಬಸ್ ನಿಲ್ದಾಣದ ಬಳಿ ಸುಬ್ರಹ್ಮಣ್ಯ ನಗರದ ಸುದೇಶ್ (27) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿದ್ದು, ಪರೀಕ್ಷೆ ನಡೆಸಿದ ತಜ್ಞರು ಇವರು ಗಾಂಜಾ ಸೇವೆ ಮಾಡಿರುವುದು ದೃಢಪಡಿಸಿದ್ದಾರೆ.
Next Story





