ಪವರ್ ಸಂಸ್ಥೆಯಿಂದ ‘ಎಂಪವರ್’ ಕಾರ್ಯಕ್ರಮ

ಉಡುಪಿ, ಮಾ.9: ಉಡುಪಿಯ ಮಹಿಳಾ ಉದ್ದಿಮೆದಾರರ ಸಂಸ್ಥೆಯಾಗಿ ರುವ ಪವರ್ ವತಿಯಿಂದ ಎಂಪವರ್ -2020 ಕಾರ್ಯಕ್ರಮ ಹಾಗೂ ಸಂಸ್ಥೆಯ ವಾರ್ಷಿಕ ದಿನಾಚರಣೆಯನ್ನು ಸೋಮವಾರ ಉಡುಪಿ ಲಿಗಾಡೋ ಹೊಟೇಲಿನ ಗ್ರಾಂಡ್ ಮಿಲೆನಿಯಂ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಪರಿಸರ ವಾದಿ ರೇವತಿ ಕಾಮತ್ ಮಾತನಾಡಿದರು. ಈ ಸಂದರ್ಭದಲ್ಲಿ 2020-21ನೆ ಸಾಲಿನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಾಯಿತು.
ವೇದಿಕೆಯಲ್ಲಿ ಕೋಶಾಧಿಕಾರಿ ಸೋನಾ ಜೀತನ್ ಫೈಡೆ, ಸಹಕಾರ್ಯದರ್ಶಿ ಪ್ರಿಯಾ ಕಾಮತ್, ನಿಯೋಜಿತ ಅಧ್ಯಕ್ಷೆ ಪುಷ್ಪಾ ಜಿ.ರಾವ್, ಕಾರ್ಯದರ್ಶಿ ಸುವರ್ಯ, ಕೋಶಾಧಿಕಾರಿ ಸುಗುಣ ಸುವರ್ಣ, ಉಪಾಧ್ಯಕ್ಷೆ ತಾರಾ ತಿಮ್ಮಯ್ಯ, ಸಹಕಾರ್ಯದರ್ಶಿ ಸವಿತಾ ತೋಳಾರ್ ಉಪಸ್ಥಿತರಿದ್ದರು.
ಪವರ್ ಅಧ್ಯಕ್ಷೆ ಶ್ರುತಿ ಜಿ.ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಸುಪ್ರಿಯಾ ಕಾಮತ್ ವರದಿ ವಾಚಿಸಿದರು. ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.
Next Story





