ಗೃಹರಕ್ಷಕಿಯರಿಗೆ ಒತ್ತಡ ನಿರ್ವಹಣೆ ಕುರಿತು ವಿಶೇಷ ತರಬೇತಿ
ಮಂಗಳೂರು, ಮಾ.9: ವಿಶ್ವ ಮಹಿಳಾ ದಿನದ ಅಂಗವಾಗಿ ದ.ಕ.ಜಿಲ್ಲಾ ಗೃಹರಕ್ಷಕ ದಳ ಮತ್ತು ಸೆಂಟರ್ ಫಾರ್ ಇಂಟರ್‌ಗ್ರೇಟೆಡ್ ಲರ್ನಿಂಗ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಒತ್ತಡ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಅನ್ವೇಷನಮ್ ಇದರ ಸಂಸ್ಥಾಪಕಿ ಸಚಿತಾ ನಂದಗೋಪಾಲ್ ತರಬೇತಿ ನೀಡಿದರು. ಪ್ರಾಧ್ಯಾಪಕಿ ಸುಮನ ಸುಧಾಕರ ಮಾತನಾಡಿದರು.
ಗೃಹರಕ್ಷಕಿಯರಾದ ನಮಿತಾ ಬಾಲಕೃಷ್ಣ ಮತ್ತು ಶಾಂತಿ ಡಿ.ಪಿ. ಅವರನ್ನು ಸನ್ಮಾನಿಸಲಾಯಿತು. ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೆಂಟರ್ ಫಾರ್ ಇಂಟರ್‌ಗ್ರೇಟೆಡ್ ಲರ್ನಿಂಗ್ ಮಂಗಳೂರು ಇದರ ಸ್ಥಾಪಕ ನಂದಗೋಪಾಲ್, ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ, ದಿವಾಕರ, ಮಹೇಶ್ ಉಪಸ್ಥಿತರಿದ್ದರು.
Next Story





