ಮಾ.26: ಬೋಳಿಯಾರು ಜುಮಾ ಮಸೀದಿಯ ಸಮಿತಿಗೆ ಚುನಾವಣೆ
ಮಂಗಳೂರು, ಮಾ.9: ಕರ್ನಾಟಕ ರಾಜ್ಯ ವಕ್ಫ್ ಬೋಡ್ ಆದೇಶದಂತೆ ಬೋಳಿಯಾರು ಮೊಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಗೆ ಚುನಾವಣೆ ನಡೆಸಲು ನಿವೃತ್ತ ಕಂದಾಯ ಅಧಿಕಾರಿ ಶೇಖ್ ಹಸನ್ ಸಾಹೇಬ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಅದರಂತೆ ಆಡಳಿತ ಸಮಿತಿ ಸದಸ್ಯರ ಆಯ್ಕೆಗಾಗಿ ಮಾ.26ರಂದು ಮಸೀದಿಯಲ್ಲಿ ಚುನಾವಣೆ ನಡೆಯಲಿದೆ.
ಮಾ. 17ರಂದು ಅಧಿಸೂಚನೆ ಪ್ರಕಟಣೆ, 18 ಮತ್ತು 19 ರಂದು ಪೂ.11ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ, 20ರಂದು ಪೂ.11 ಗಂಟೆಯಿಂದ ಮಧ್ಯಾಹ್ನ 2ರವರೆಗೆ ನಾಮಪತ್ರ ಪರಿಶೀಲನೆ, 21ರಂದು ಪೂ.11ಗಂಟೆಯಿಂದ ಮಧ್ಯಾಹ್ನ 2ರವರೆಗೆ ನಾಮಪತ್ರ ಹಿಂತೆಗೆತ, 21ರಂದು ಸಂಜೆ 4 ಗಂಟೆಗೆ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ, 26ರಂದು ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3ರವರೆಗೆ ಚುನಾವಣೆ ಮತ್ತು ಅಂದು ಅಪರಾಹ್ನ 3 ಗಂಟೆಗೆ ಮತ ಎಣಿಕೆ ಹಾಗೂ ಸಂಜೆ 5 ಗಂಟೆಗೆ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ದೂ.ಸಂ: 9448625999 ಸಂಪರ್ಕಿಸಲು ಚುನಾವಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.





