ಪೇರ ದರ್ಗಾ ಉರೂಸ್
ಮಂಗಳೂರು, ಮಾ.9: ಬಜ್ಪೆ ಕೆಂಜಾರಿನ ಪೇಜಾವರ (ಪೇರ) ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಮತ್ತು ಹಝ್ರತ್ ಶೈಖ್ ಹಾಜಿ ವಲಿಯುಲ್ಲಾಹಿ ದರ್ಗಾದ 14ನೆ ಉರೂಸ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಶೈಖುನಾ ಬೆಳ್ಳೂರು ಉಸ್ತಾದ್ ಅಸ್ಗರ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಅಸೈಯದ್ ಮುಹ್ಸಿನ್ ಸೈದಲವಿ ಕೋಯ ತಂಙಳ್ ದುಆಗೈದರು. ಮಸೀದಿಯ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಇಬ್ರಾಹೀಂ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಚೊಕ್ಕಬೆಟ್ಟು ಮಸೀದಿಯ ಮುದರ್ರಿಸ್ ಅಬ್ದುಲ್ ಅಝೀಝ್ ದಾರಿಮಿ ದಿಕ್ಸೂಚಿ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಅಬ್ಬಾಸ್ ಹಾಜಿ, ಮಳವೂರು ಗ್ರಾಪಂ ಅಧ್ಯಕ್ಷ ಗಣೇಶ್ ಅರ್ಬಿ, ಉರೂಸ್ ಉಪ ಸಮಿತಿಯ ಸಂಚಾಲಕ ಕೆ.ಪಿ. ಮುಹಮ್ಮದ್ ಯಾನೆ ಪಯಣಿಗ ಭಾಗವಹಿಸಿದ್ದರು.
Next Story





