ಸಸಿಹಿತ್ಲು ದರ್ಗಾ ಶರೀಫ್ ಉರೂಸ್

ಮಂಗಳೂರು, ಮಾ.9: ಸುರತ್ಕಲ್ ಸಮೀಪದ ಮುಕ್ಕ-ಸಸಿಹಿತ್ಲುವಿನಲ್ಲಿರುವ ಹಝ್ರತ್ ಸುಲ್ತಾನ್ ಸೈಯದ್ ಫತಾಹ್ ವಲಿಯುಲ್ಲಾ ದರ್ಗಾ ಶರೀಫ್‌ನ ಉರೂಸ್ ಕಾರ್ಯಕ್ರಮವು ಶನಿವಾರ ಸಮಾರೋಪಗೊಂಡಿತು.
ಎಸ್. ಉಮರ್ ಲಿಬರ್ಟಿ ಸುರತ್ಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ದುಆಗೈದರು. ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಭಾಷಣಗೈದರು.
ಅತಿಥಿಗಳಾಗಿ ಅಲ್‌ಹಾಜ್ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಲ್‌ಹಾಜ್ ಯು.ಕೆ. ಮೋನು ಕಣಚೂರು, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಶಾಹುಲ್ ಹಮೀಸ್ ಕದಿಕೆ, ಮುಕ್ಕ ಜುಮಾ ಮಸೀದಿಯ ಖತೀಬ್ ವಿ.ಎ. ಮನ್ಸೂರ್ ಮದನಿ ವಳವೂರು, ಮುಲ್ಕಿ ಶಾಫಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ, ಸಸಿಹಿತ್ಲು ಅಲ್‌ಶೈಖ್ ಜುಮಾ ಮಸೀದಿಯ ಖತೀಬ್ ಕೆ. ಉಸ್ಮಾನ್ ಸಖಾಫಿ ಕುಕ್ಕಿಲ, ಮುದರ್ರಿಸ್ ಎಂ.ಕೆ. ಸಿನಾನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.





