ಆಕಾಶ್ ಪ್ರಹಾರ: ಸೌರಾಷ್ಟ್ರ ಸಾಧಾರಣ ಮೊತ್ತ
ಅವಿ ಬಾರೋಟ್, ವಿಶ್ವ ರಾಜ್ ಜಡೇಜ ಅರ್ಧಶತಕ

ರಾಜ್‌ಕೋಟ್, ಮಾ.9: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ದಿನ ಬಂಗಾಳ ವಿರುದ್ಧ ಸೌರಾಷ್ಟ್ರ ತಂಡ ಸಾಧಾರಣ ಮೊತ್ತ ದಾಖಲಿಸಿದೆ.
ಪಂದ್ಯದ ಮೊದಲ ದಿನಾದಾಟದಂತ್ಯಕ್ಕೆ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ 80.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸಿದೆ.
ಅರ್ಪಿತ್ ವಾಸವದಾ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಚೇತೇಶ್ವರ ಪೂಜಾರ ಗಾಯಗೊಂಡು ನಿವೃತ್ತರಾಗಿದ್ದಾರೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ತಂಡ ಆರಂಭದಲ್ಲಿ ಉತ್ತಮ ರನ್ ದಾಖಲಿಸಿದ್ದರೂ ಬಳಿಕ ಆಕಾಶ್ ದೀಪ್(41ಕ್ಕೆ 3) ದಾಳಿಗೆ ಸಿಲುಕಿ ವಿಕೆಟ್‌ಗಳನ್ನು ಕೈ ಚೆಲ್ಲಿತು.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹಾರ್ವಿಕ್ ದೇಸಾಯಿ ಮತ್ತು ವಿಕೆಟ್ ಕೀಪರ್ ಅವಿ ಬಾರೊಟ್ ಮೊದಲ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿದರು. 37.5ನೇ ಓವರ್‌ನಲ್ಲಿ ಶಹಬಾಝ್ ಅಹ್ಮದ್ ಎಸೆತದಲ್ಲಿ ದೇಸಾಯಿ ಅವರು ಅಭಿಷೇಕ್ ರಾಮನ್‌ಗೆ ಕ್ಯಾಚ್ ನೀಡಿದರು. ದೇಸಾಯಿ 38 ರನ್ ಗಳಿಸಿದರು. ಅವಿ ಮತ್ತು ವಿಶ್ವರಾಜ್ ಭಾರದ್ವಾಜ್ ಅರ್ಧಶತಕಗಳ ಕೊಡುಗೆ ನೀಡಿ ತಂಡದ ಮೊತ್ತವನ್ನು ಏರಿಸಿದರು.
ಬಾರೋಟ್ 54 ರನ್(142ಎ, 6ಬೌ) ಮತ್ತು ವಿಶ್ವರಾಜ್ ಭಾರದ್ವಾಜ್ 54 ರನ್(92ಎ, 7ಬೌ) ಗಳಿಸಿ ಆಕಾಶ್ ದೀಪ್‌ಗೆ ವಿಕೆಟ್ ಒಪ್ಪಿಸಿದರು. ಶೆಲ್ಡಾನ್ ಜಾಕ್ಸನ್ 14 ರನ್, ಚೇತನ್ ಸಕಾರಿಯಾ 4 ರನ್ ಗಳಿಸಿ ಔಟಾದರು.







