ನಾಪತ್ತೆಯಾದ ವ್ಯಕ್ತಿ ನೇಣಿಗೆ ಶರಣು; ಮೃತದೇಹ ಪತ್ತೆ
ಮಂಗಳೂರು, ಮಾ. 9: ಉರ್ವಸ್ಟೋರ್ಸ್‌ನ ಆಕಾಶವಾಣಿ ಕ್ವಾಟರ್ಸ್ ಬಳಿಯ ಮನೆಯಿಂದ ಮಾ. 4 ರಂದು ಹೊರಟು ಹೋಗಿ ನಾಪತ್ತೆಯಾಗಿದ್ದ ಮನೋಜ್ (32) ಅವರು ನಗರದ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಟೇಲ್ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ವೃತ್ತಿಯಲ್ಲಿ ಮೆಡಿಕಲ್ ರೆಪ್ ಆಗಿರುವ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೋಜ್ ಮೂಲತ: ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ಆಗಿದ್ದು, 8 ತಿಂಗಳ ಹಿಂದೆ ಮದುವೆ ಆಗಿದ್ದರು. ಬಳಿಕ ಪತ್ನಿ ಜೊತೆ ಉರ್ವಸ್ಟೋರ್ ಬಳಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಾ. 4 ರಂದು ನಾಪತ್ತೆಯಾದ ಮನೋಜ್ ಮಾ. 5 ರಂದು ಪುತ್ತೂರಿನಲ್ಲಿ ಎಟಿಎಂ ಮೂಲಕ 5000 ರೂ . ಡ್ರಾ ಮಾಡಿದ್ದರು. ಹಾಗಾಗಿ ಅವರು ಬೆಂಗಳೂರು ಕಡೆಗೆ ಹೋಗಿರಬಹುದೆಂದು ಅಂದಾಜಿಸಲಾಗಿತ್ತು. ಅವರ ಬೈಕ್ ಕೂಡಾ ಪುತ್ತೂರು ಬಳಿ ಪತ್ತೆಯಾಗಿತ್ತು.
Next Story





