ವಿಶ್ವ ಶಾಂತಿಗಾಗಿ ಸೈಕಲ್ ನಲ್ಲಿ ಭಾರತ ಯಾತ್ರೆ: ಮೈಸೂರಿಗೆ ಆಗಮಿಸಿದ ಹಾಸನದ ನಾಗರಾಜಗೌಡ
ಮೈಸೂರು,ಮಾ.9: ಹಾಸನ ಮೂಲದ ವ್ಯಕ್ತಿಯೊಬ್ಬರು ವಿಶ್ವಶಾಂತಿ ಸಂದೇಶ ಸಾರಲು ಸೈಕಲ್ ನಲ್ಲಿ ಭಾರತ ಯಾತ್ರೆ ಕೈಗೊಂಡಿದ್ದು, ಇದೀಗ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ.
ಹಾಸನ ಮೂಲದ ನಾಗರಾಜಗೌಡ ಎಂಬುವವರು ವಿಶ್ವ ಶಾಂತಿಗಾಗಿ ಸೈಕಲ್ ನಲ್ಲಿ ಭಾರತ ಯಾತ್ರೆ ಕೈಗೊಂಡಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಸೇರಿ 13 ರಾಜ್ಯಗಳನ್ನು ಸುತ್ತಿರುವ ನಾಗರಾಜ್ ಸರ್ವಧರ್ಮ ಸಮನ್ವಯ ಹಾಗೂ ದೇಶಾಭಿಮಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ನಾಗರಾಜ್ ಈಗಾಗಲೇ ಸುಮಾರು 20 ಸಾವಿರ ಕಿ.ಲೋ ಭಾರತ ಪರ್ಯಟನೆ ಮಾಡಿದ್ದು, ಇದೀಗ ಕರ್ನಾಟಕ ರಾಜ್ಯ ಪರ್ಯಟನೆಯಲ್ಲಿ ಮೈಸೂರಿಗೆ ಬಂದಿದ್ದಾರೆ. ಇನ್ನೂ ಹಲವು ರಾಜ್ಯಗಳನ್ನು ಸುತ್ತಿ ವಿಶ್ವಶಾಂತಿಗಾಗಿ ಸಂದೇಶ ಸಾರಲು ಮುಂದಾಗಿದ್ದಾರೆ.
Next Story





