ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣ: ಶಂಕಿತ ಉಗ್ರ ಆದಿತ್ಯ ರಾವ್ ಪರೇಡ್

ಮಂಗಳೂರು, ಮಾ.10: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಸ್ಫೋಟಕ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ಉಗ್ರ ಆದಿತ್ಯ ರಾವ್‌ನನ್ನು ಮಂಗಳೂರು ಕಾರಾಗೃಹದಲ್ಲಿ ಸಾಕ್ಷಿಗಳ ಮುಂದೆ ಮಂಗಳವಾರ ಬೆಳಗ್ಗೆ ಪರೇಡ್ ನಡೆಸಲಾಯಿತು.
ಮಂಗಳೂರು ತಹಶೀಲ್ದಾರ್ ಮತ್ತು ಸಿಬ್ಬಂದಿ ಹಾಗೂ ಜೈಲು ಅಧೀಕ್ಷಕರ ಸಮ್ಮುಖದಲ್ಲಿ 15 ಮಂದಿ ಸಾಕ್ಷಿಗಳಿಂದ ಗುರುತು ಹಚ್ಚುವ ಕಾರ್ಯ ನಡೆಯಿತು.
‘ಪರೇಡ್‌ನ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಆ ಮಾಹಿತಿಯನ್ನು ಮುಚ್ಚಿದ ಕವರ್‌ನಲ್ಲಿ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
Next Story





