ಮಾ.11ರಂದು ಪೋಷಣ್ ಪಕ್ವಾಡಾ ಜಾಥಾ ಕಾರ್ಯಕ್ರಮ
ಉಡುಪಿ, ಮಾ.10: ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪೋಷಣೆ ಅಭಿಯಾನ ಅಂಗವಾಗಿ ‘ಪೋಷಣ್ ಪಕ್ವಾಡಾ-2020’ ಕಾರ್ಯಕ್ರಮಕ್ಕೆ ಪೂರಕವಾಗಿ ಸಾಮಾಜಿಕ ಅರಿವುಂಟು ಮಾಡುವ ಜಾಥಾ ಕಾರ್ಯಕ್ರಮವನ್ನು ಮಾ.11ರ ಅಪರಾಹ್ನ 3:30ಕ್ಕೆ ಬ್ರಹ್ಮಗಿರಿ ಜಿಲ್ಲಾ ಬಾಲಭವನ ಆವರಣದ ಶಿಶು ಅಭಿವೃದ್ಧಿ ಯೋಜನೆ ಕಚೇರಿಯಿಂದ ಉಡುಪಿ ತಾಲೂಕು ಪಂಚಾಯತ್ ಕಚೇರಿವರೆಗೆ ಏರ್ಪಡಿಸಲಾಗಿದೆ ಎಂದು ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





