ಅಫ್ಘಾನ್‌ನಿಂದ ಅಮೆರಿಕ ಸೈನಿಕರನ್ನು ಹಿಂದಕ್ಕೆ ಕರೆಸುವ ಪ್ರಕ್ರಿಯೆ ಆರಂಭ
ವಾಶಿಂಗ್ಟನ್, ಮಾ. 10: ತಾಲಿಬಾನ್ ಜೊತೆಗೆ ಫೆಬ್ರವರಿ 29ರಂದು ಸಹಿ ಹಾಕಲಾದ ಶಾಂತಿ ಒಪ್ಪಂದದ ಅನುಸಾರವಾಗಿ, ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಮೆರಿಕದ ರಕ್ಷಣ ಇಲಾಖೆ ಪೆಂಟಗನ್‌ನ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಈಗ ಇರುವ 12,000ಕ್ಕೂ ಅಧಿಕ ಅಮೆರಿಕ ಸೈನಿಕರನ್ನು ಅಮೆರಿಕವು 135 ದಿನಗಳಲ್ಲಿ 8,600ಕ್ಕೆ ಇಳಿಸಬೇಕಾಗಿದೆ ಎಂದು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳ ವಕ್ತಾರ ಕರ್ನಲ್ ಸಾನಿ ಲೆಗಿಟ್ ಹೇಳಿದರು.
‘‘ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಹೊರತಾಗಿಯೂ, ಅಲ್-ಖಾಯಿದ ಮತ್ತು ಐಸಿಸ್-ಕೆ ವಿರುದ್ಧದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸುವ ಹಾಗೂ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ಭದ್ರತಾ ಪಡೆಗಳಿಗೆ ನೆರವು ನೀಡುವ ನಮ್ಮ ಉದ್ದೇಶಗಳನ್ನು ಸಾಧಿಸುವ ನಮ್ಮ ಎಲ್ಲ ಅಧಿಕಾರಗಳನ್ನು ಉಳಿಸಿಕೊಂಡಿದ್ದೇವೆ’’ ಎಂದು ಅವರು ಹೇಳಿಕೊಂಡರು.
Next Story





