737 ಮ್ಯಾಕ್ಸ್ ವಿಮಾನ ಹಾರಾಟಕ್ಕೆ ಬೋಯಿಂಗ್ ಸಾಕಷ್ಟು ತರಬೇತಿ ನೀಡಿಲ್ಲ: ಇಥಿಯೋಪಿಯ ತನಿಖಾ ವರದಿ
ಅಡಿಸ್ ಅಬಾಬ (ಇಥಿಯೋಪಿಯ), ಮಾ. 10: 737 ಮ್ಯಾಕ್ಸ್ ಮಾದರಿಯ ವಿಮಾನ ಹಾರಾಟಕ್ಕಾಗಿ ಬೋಯಿಂಗ್ ಕಂಪೆನಿಯು ಸಾಕಷ್ಟು ತರಬೇತಿ ನೀಡಿಲ್ಲ ಹಾಗೂ ವಿಮಾನದ ಮಹತ್ವದ ಸಾಫ್ಟ್‌ವೇರ್ ದೋಷಯುಕ್ತವಾಗಿತ್ತು ಎಂದು ಕಳೆದ ವರ್ಷ ನಡೆದ ಇಥಿಯೋಪಿಯ ಏರ್‌ಲೈನ್ಸ್ ವಿಮಾನದ ಅಪಘಾತದ ಬಗ್ಗೆ ತನಿಖೆ ನಡೆಸಿರುವ ಇಥಿಯೋಪಿಯ ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷದ ಮಾರ್ಚ್ 10ರಂದು ಇಥಿಯೋಪಿಯದ ಅಡಿಸ್ ಅಬಾಬ ವಿಮಾನ ನಿಲ್ದಾಣದಿಂದ ಕೆನ್ಯದ ನೈರೋಬಿಗೆ ಹಾರುತ್ತಿದ್ದ 737 ಮ್ಯಾಕ್ಸ್ ವಿಮಾನವು ಅಡಿಸ್ ಅಬಾಬ ಹೊರವಲಯದಲ್ಲಿ ಪತನಗೊಂಡಿತ್ತು. ಅದರಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ.
Next Story





