ಕೂಳೂರು : ಕಂಟೈನರ್‌ನಿಂದ ಸಂಚಾರಕ್ಕೆ ತೊಂದರೆ
ಮಂಗಳೂರು, ಮಾ.10: ನಗರ ಹೊರವಲದ ಕೂಳೂರು ಬಳಿ ಕಂಟೈನರ್ ಲಾರಿಯೊಂದು ಕೆಟ್ಟು ರಸ್ತೆಗೆ ಅಡ್ಡವಾಗಿ ನಿಂತು ಜಾಮ್ ಆದ ಪರಿಣಾಮ ಸುಮಾರು ಮೂರು ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬಳಿಕ ರಸ್ತೆಗೆ ಅಡ್ಡವಾಗಿ ಕೆಟ್ಟು ನಿಂತ ಕಂಟೈನರ್‌ನ್ನು ಕ್ರೇನ್ ಮೂಲಕ ತೆರವುಗೊಳಿಸಲಾಯಿತು. ಪಣಂಬೂರು ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆಯ ವ್ಯವಸ್ಥೆ ಕಲ್ಪಿಸಿದರು.
Next Story





