ಕಾಂತಾವರ ಅಂಚೆ ಕಚೇರಿಯಲ್ಲಿ ಕಳವಿಗೆ ಯತ್ನ
ಕಾರ್ಕಳ, ಮಾ.10: ಕಾಂತಾವರ ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ಮಾ.9ರಂದು ರಾತ್ರಿ ವೇಳೆ ನಡೆದಿದೆ.
ಕಚೇರಿಯ ಕಿಟಕಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಚೇರಿಯಲ್ಲಿನ ಲಾಕರ್ ಬಾಗಿಲಿನ ಕೊಂಡಿಯನ್ನು ಮುರಿದು ಬಾಗಿಲನ್ನು ಒಡೆಯಲು ಹಾಗೂ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





