ಯುವತಿ ನಾಪತ್ತೆ

ಉಳ್ಳಾಲ : ತಾಲೂಕಿನ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಆನೆಗುಡ್ಡೆ ದೇವಸ್ಥಾನ ಬಳಿಯ ನಿವಾಸಿ ಸುಮಿತ್ರ ಎಂಬವರ ಪುತ್ರಿ ಸ್ವಾತಿ (20) ನಾಪತ್ತೆಯಾದವರು.
ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಾ.8 ರಂದು ಆಸ್ಪತ್ರೆಯ ಹಾಸ್ಟೆಲ್ ಗೆ ಹೋಗಿ ಅಲ್ಲಿಂದ ರಾತ್ರಿ 8ಕ್ಕೆ ಆಕೆಯ ದೊಡ್ಡಮ್ಮ ಶಿವಮ್ಮ ಎಂಬವರ ಜತೆಯಲ್ಲಿ ಊರಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಮನೆಗೆ ಸ್ವಾತಿ ತಲುಪದೇ ಇರುವುದರಿಂದ ಆಕೆಯ ತಾಯಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





