ಶಕ್ತಿ ವಿದ್ಯಾ ಸಂಸ್ಥೆಗೆ ಡಾ.ಯಶೋವರ್ಮ ಭೇಟಿ

ಮಂಗಳೂರು, ಮಾ.10: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜಿಗೆ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಮಂಗಳವಾರ ಭೇಟಿ ನೀಡಿದರು.
ಅತ್ಯಾಧುನಿಕ ವಿಶಾಲ ಕಟ್ಟಡಗಳು, ದೊಡ್ಡ ಆಟದ ಮೈದಾನ, ಈಜುಕೊಳ, ಸುಸಜ್ಜಿತ ವಾಚನಾಲಯ, ಪ್ರಯೋಗಶಾಲೆಗಳು, ಸಾವಯವ ತರಕಾರಿ ಕೃಷಿ, ವಿದ್ಯಾರ್ಥಿ ನಿಲಯಗಳು, ಶಾಲಾ-ಕಾಲೇಜು ಮಕ್ಕಳಲ್ಲಿ ಮನೆ ಮಾಡಿದ್ದ ಶಿಸ್ತು, ರುಚಿ - ಶುಚಿಗೆ ಆದ್ಯತೆ ನೀಡಿರುವ ಕ್ಯಾಂಟೀನ್ ಹಾಗೂ ವಿದ್ಯಾರ್ಥಿನಿಲಯಗಳು ಸಂದರ್ಶಕರ ಗಮನ ಸೆಳೆದವು.
ಶಾಲೆ ಹಾಗೂ ಕಾಲೇಜಿನ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಡಾ.ಯಶೋವರ್ಮ, ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದೂರದೃಷ್ಟಿಯನ್ನು ಅರ್ಥೈಸಿಕೊಂಡು ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಹಿತದೃಷಿ ಗಮನದಲ್ಲಿಟ್ಟುಕೊಂಡು ದುಡಿಯುವುದೇ ಆದ್ಯ ಕರ್ತವ್ಯವಾಗಿರಬೇಕು ಎಂದರು.
ಸಮಾರಂಭದಲ್ಲಿ ಶಕ್ತಿ ಎಜುಕೇಶನ್ ಟ್ರಸ್ಟ್‌ನ ಸ್ಥಾಪಕ ಡಾ.ಕೆ.ಸಿ. ನಾಯಕ್, ಕಾರ್ಯದರ್ಶಿ ಸಂಜಿತ್ ನಾಯಕ್, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ., ಪ್ರಧಾನ ಸಲಹೆಗಾರ ರಮೇಶ ಕೆ., ಕಾಲೇಜು ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಉಜಿರೆ ಎಸ್. ಡಿ.ಎಂ ಕಾಲೇಜಿನ ಪ್ರಾಚಾರ್ಯ ಮನಮೋಹನ್ ನಾಯಕ್, ವರ್ಧಮಾನ್, ಶ್ರುತಿ, ಮೈತ್ರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಸ್ಕೃತ ಪ್ರಾಧ್ಯಾಪಕ ಶ್ರೀನಿಧಿ ಅಭ್ಯಂಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






.jpg)
.jpg)
.jpg)
.jpg)

