ಸಹ್ಯಾದ್ರಿ ಕಾಲೇಜಿಗೆ ಎನ್‌ಬಿಎ ಮಾನ್ಯತೆ

ಮಂಗಳೂರು, ಮಾ.10: ಸಹ್ಯಾದ್ರಿ ಕಾಲೇಜಿನ ಐದು ಇಂಜಿನಿಯರಿಂಗ್ ವಿಭಾಗಗಳಿಗೆ ನವದೆಹಲಿಯ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್‌ನಿಂದ (ಎನ್‌ಬಿಎ) ಮಾನ್ಯತೆ ನೀಡಲಾಗಿದೆ.
ಸಹ್ಯಾದ್ರಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಇನ್ಫಾರ್ಮೆಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗಗಳಿಗೆ ಮಾನ್ಯತೆ ನೀಡಲಾಗಿದೆ.
ಸಹ್ಯಾದ್ರಿ ಇಂಜಿನಿಯರ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಎಲ್ಲ ಐದು ಬ್ರಾಂಚ್‌ಗಳಿಗೆ ಮೂರು ವರ್ಷಗಳವರೆಗೆ (2020-2023) ಎನ್‌ಬಿಎಯಿಂದ ಮಾನ್ಯತೆ ದೊರೆಯುವ ಮೂಲಕ ಸಹ್ಯಾದ್ರಿ ಕಾಲೇಜು ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಎನ್‌ಬಿಎ ಪರಿಣತರ ಸಮಿತಿಯು ಸಹ್ಯಾದ್ರಿ ಕಾಲೇಜಿನ ಐದು ವಿಭಾಗಗಳಿಗೆ ಇತ್ತೀಚೆಗೆ ಭೇಟಿ ನೀಡಿ, ಮೌಲ್ಯಮಾಪನ ಕೈಗೊಂಡಿತ್ತು.
ಸಹ್ಯಾದ್ರಿ ಇಂಜಿನಿಯರ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು 2017ರಲ್ಲಿಯೇ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿತ್ತು. ಪ್ರಸ್ತುತ ದೊರೆತಂತಹ ಎನ್‌ಬಿಎ ಮಾನ್ಯತೆಯು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮತ್ತಷ್ಟು ಜವಾಬ್ಧಾರಿಯುತ ಬದ್ಧತೆಯನ್ನು ನೀಡಿದೆ.
ಸಹ್ಯಾದ್ರಿ ಕಾಲೇಜಿನಲ್ಲಿ ರೂಪುರೇಷೆ ಪಡೆದಿರುವ ‘ಔಟ್ ಕಮ್ ಬೇಸ್ಡ್’ ಶಿಕ್ಷಣ ಕ್ರಮ ಹಾಗೂ ಸಹ್ಯಾದ್ರಿ ವಿದ್ಯಾಸಂಸ್ಥೆಯಲ್ಲಿ ಅಪೂರ್ವವಾಗಿ ಕೈಗೊಂಡಿರುವಂತಹ ಇನಿಶಿಯೇಟಿವ್ಸ್‌ಗಳಿಗೆ ಎನ್‌ಬಿಎ ಸಮಿತಿ ಸದಸ್ಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







