ಭಟ್ಕಳ: ಫುಟ್ಬಾಲ್ ಚಾಂಪಿಯನ್‍ಶಿಪ್ 2020

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಫುಟ್‍ಬಾಲ್ ಅಸೋಶಿಯೇಶನ್ ಹಾಗೂ ಕರ್ನಾಟಕ ರಾಜ್ಯ ಫುಟ್‍ಬಾಲ್ ಅಸೋಶಿಯೇಶನ್ ಇದರ ಸಹಯೋಗದೊಂದಿಗೆ ವಾರ್ಷಿಕ ಚಾಂಪಿಯನ್‍ಶಿಪ್-2020 ನಡೆಯಿತು.
ಝೋನ್ "ಎ" ರಲ್ಲಿ ಆಟವಾಡಿದ ಐದು ಕ್ಲಬ್‍ಗಳಲ್ಲಿ ದಾಂಡೇಲಿ ಎಫ್.ಸಿ., ಮಾರಿಕಾಂಬಾ ಎಫ್.ಸಿ. ಶಿರಸಿ, ಹಳಿಯಾಳ ಎಫ್.ಸಿ., ಮುಂಡಗೋಡ ಎಫ್.ಸಿ., ರೆವನಾಥ ಎಫ್.ಸಿ. ಕುಮಟಗಳಲ್ಲಿ ಮಾರಿಕಾಂಬಾ ಎಫ್.ಸಿ. ಶಿರಸಿ ಹಾಗೂ ರೆವನಾಥ ಎಫ್.ಸಿ. ಕುಮಟಾ ಸೆಮಿಫೈನಲ್ ತಲುಪಿದವು.
ಝೋನ್ "ಬಿ" ರಲ್ಲಿ ಆಟವಾಡಿದ ಭಟ್ಕಳ ಎಫ್.ಸಿ., ಕಾರವಾರ ಎಫ್.ಸಿ., ಬಿಫಾ ಎಫ್.ಸಿ., ಮಂಕಿ ಎಫ್.ಸಿ., ಹೊನ್ನಾವರ ಎಫ್.ಸಿ., ಗಳಲ್ಲಿ ರಫ್ ಶಿರೂರು ಹಾಗೂ ಬಿಫಾ ಎಫ್.ಸಿ. ಸೆಮಿಫೈನಲ್ ತಲುಪಿದವು.
ಅಂತಿಮ ಪಂದ್ಯಾವಳಿ ಬಿಫಾ ಎಫ್.ಸಿ. ಹಾಗೂ ರಫ್ ಶಿರೂರು ನಡುವೆ ನಡೆದು ಬಿಫಾ ಎಫ್.ಸಿ. ವಿಜೇತ ತಂಡವಾಗಿ ಹೊರ ಹೊಮ್ಮಿತು.
ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಫುಟ್‍ಬಾಲ್ ಅಸೋಶಿಯೇಶನ್ ಅಧ್ಯಕ್ಷ ಹಿಫುಝುರಹ್ಮಾನ್ ಬರ್ಮಾವರ್, ಜಿಲ್ಲಾ ಉಸ್ತುವಾರಿ ರಂಜಿತ್ ಕುಮಾರ್, ಸ್ಥಳೀಯರಾದ ಇನಾಯತುಲ್ಲಾ ಶಾಬಂದ್ರಿ, ಘನಿ ಎಂ.ಎಚ್., ಅಬ್ದುಲ್ ಗಫೂರ್ ಶೇಖ್, ಅಹೀದ್ ಮೊಹತೆಶಂ., ಮಾವಿಯಾ ಮೊಹತೆಶಂ, ಫವಾದ್ ಶಾಬಂದ್ರಿ, ಅರ್ಫಾತ್ ತೋನ್ಸೆ, ಅತೀಕ್, ಫವಾಝ್ ಶಾಬಂದ್ರಿ, ಖುರ್ಷಿದ್ ಬೈಂದೂರು, ಗಾನಿಮ್ ಮೊಹತೆಶಂ., ಮೊಹಮ್ಮದ್ ಫಯಾಝ್, ಗುಲ್ ಮೊಹಮ್ಮದ್ ಬೈಂದೂರು ಮುಂತಾದವರು ಉಪಸ್ಥಿತರಿದ್ದರು.







