ಆರ್ಥಿಕ ಇಲಾಖೆ ಮಸಣ ಇದ್ದಂತೆ: ಮಾಜಿ ಸಚಿವೆ ಜಯಮಾಲಾ

ಬೆಂಗಳೂರು, ಮಾ.10: ಆರ್ಥಿಕ ಇಲಾಖೆ(ಎಫ್‌ಡಿ)ಗೆ ಹೋದ ಯಾವುದೇ ಕಡತ ವಾಪಸ್ಸು ಬರಲ್ಲ. ಇದು ಒಂದು ರೀತಿ ಮಸಣ ಇದ್ದಂತೆ ಎಂದು ಮಾಜಿ ಸಚಿವೆ ಜಯಮಾಲಾ ಟೀಕಿಸಿದರು.
ಮಂಗಳವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಅವರು ಮಾತನಾಡಿದರು.
ರಾಜಧಾನಿ ಬೆಂಗಳೂರಿನಲ್ಲಿಯೇ ವೇಶ್ಯಾವಾಟಿಕೆ ದಂಧೆ ಬೀಡು ಬಿಟ್ಟಿದೆ. ಅಷ್ಟೇ ಅಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಮಾನವ ಕಳ್ಳ ಸಾಗಣೆಯೂ ಜೀವಂತವಾಗಿದೆ. ಹೀಗಿರುವಾಗ, ಸರಕಾರವೂ ವಿಶೇಷ ಯೋಜನೆ ಅಡಿ ಅನುದಾನ ನೀಡಲು ಮುಂದಾಗುತ್ತದೆ. ಆದರೆ, ಆರ್ಥಿಕ ಇಲಾಖೆಗೆ ಕಳುಹಿಸುವ ಕಡತವೂ ಬರುವುದೇ ಇಲ್ಲ. ಇದು ಮಸಣಕ್ಕೆ ಕಳುಹಿಸಿದ ಹೆಣದಂತೆ ಆಗಿದೆ ಎಂದರು.
Next Story





