ಮಾ.15: ತುರ್ಕಳಿಕೆ ದರ್ಗಾ ಶರೀಫ್ ಉರೂಸ್
ಪುತ್ತೂರು: ತುರ್ಕಳಿಕೆ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಇದರ ಉರೂಸ್ ಸಮಾರಂಭ ಮಾ. 15ರಂದು ಸಂಜೆ 6 ಗಂಟೆಗೆ ತುರ್ಕಳಿಕೆ ದರ್ಗಾ ವಠಾರದಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಹಂಝ ಪಿ.ಟಿ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉರೂಸ್ ಪ್ರಯುಕ್ತ ಮಾ.11ರಿಂದ ಪ್ರತಿದಿನ ರಾತ್ರಿ ಧಾರ್ಮಿಕ ಪ್ರವಚನ ನಡೆಯಲಿದ್ದು, ಮಾ.12ರಂದು ಕೇರಳದ ಅಸ್ಸಯ್ಯದ್ ಜುನೈದ್ ತಂಙಳ್ ಚೌಹರಿ, ಮಾ.13ರಂದು ರಫೀಕ್ ಸಅದಿ ದೇಲಂಪಾಡಿ, ಮಾ.14ರಂದು ಕಬೀರ್ ಹಿಮಮಿ ಕಾಸರಗೋಡು ಮತ್ತು ಮಾ.15ರಂದು ನೌಫಲ್ ಸಖಾಫಿ ಕಳಸ ಪ್ರಭಾಷಣ ನೀಡಲಿದ್ದಾರೆ.
ಮಾ.15ರಂದು ಮಧ್ಯಾಹ್ನ ಖತಮುಲ್ ಕುರ್ ಆನ್ ಹಾಗೂ ಮೌಲೀದ್ ಪಾರಾಯಣ, ಸಂಜೆ ಉರೂಸ್ ಸಮಾರೋಪ ಸಮಾರಂಭ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಫಝಲ್ ಕೋಯಮ್ಮ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳ್ತಂಗಡಿ ತಾಲೂಕು ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಕಡಲುಂಡಿ ದುವಾಶೀರ್ವಚನ ನೀಡಲಿದ್ದಾರೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಶಾಫಿ ಸಅದಿ ಸಂದೇಶ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಅಲಿ ಕರಾಯ, ಉಪಾಧ್ಯಕ್ಷ ಪಿ.ಎಸ್. ಇಬ್ರಾಹಿಂ ಮದನಿ, ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ, ಮೂರುಗೋಳಿ ಎಸ್‍ವೈಎಸ್ ಅಧ್ಯಕ್ಷ ಹೈದರ್ ಹಾಜಿ ಬದ್ಯಾರ್ ಉಪಸ್ಥಿತರಿದ್ದರು.







