ಮಾ.12: ಮಂಗಳೂರು ನಗರದಲ್ಲಿ ಉಪವಾಸ ಸತ್ಯಾಗ್ರಹ
ಮಂಗಳೂರು, ಮಾ.11: ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ದಂಡಿ ಸತ್ಯಾಗ್ರಹದ 90 ವರ್ಷಾಚರಣೆಯಂದು (ಮಾ.12) ಸರಕಾರವು ಜಾರಿಗೆ ತರಲಿರುವ ಎನ್‌ಪಿಆರ್ ಕೈಬಿಡುವಂತೆ ಒತ್ತಾಯಿಸಿ, ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ವನ್ನು ನಾವು ಭಾರತೀಯರು (ವಿ ದಿ ಪೀಪಲ್ ಆಫ್ ಇಂಡಿಯಾ) ರಾಜ್ಯ ಸಮಿತಿ ಹಮ್ಮಿಕೊಂಡಿದೆ.
ಅದರ ಭಾಗವಾಗಿ ನಗರದ ಮಿನಿ ವಿಧಾನ ಸೌಧದ ಮುಂಭಾಗ (ಕ್ಲಾಕ್ ಟವರ್ ಬಳಿ) ಮಾ.12ರಂದು ಬೆಳಗ್ಗೆ 10ಕ್ಕೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಯಲಿದೆ. ಸಂಜೆ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ‘ನಾವು ಭಾರತೀಯರು’ ದ.ಕ. ಜಿಲ್ಲಾ ಪ್ರತಿನಿಧಿ ಉಮರ್ ಯು.ಎಚ್.ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





