ಕೆಎಂಎಫ್‌ಗೆ ಸಾರ್ವಜನಿಕರ ಭೇಟಿ ಮುಂದೂಡಲು ಮನವಿ
ಮಂಗಳೂರು, ಮಾ.11: ಪ್ರಪಂಚದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಹಿನ್ನಲೆಯಲ್ಲಿ ಮತ್ತು ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ತನ್ನ ಘಟಕಗಳಾದ ಮಂಗಳೂರು ಡೇರಿ, ಉಡುಪಿ ಡೇರಿ, ಮಣಿಪಾಲ ಹಾಗೂ ಪುತ್ತೂರು ಶೀತಲೀಕರಣ ಕೇಂದ್ರಕ್ಕೆ ಭೇಟಿ/ಸಂದರ್ಶನ ನೀಡುವುದನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ನೆಲೆಯಲ್ಲಿ ಅನಿರ್ಧಿಷ್ಟಾವಧಿವರೆಗೆ ನಿರ್ಬಂಧಿಸಲಾಗಿದೆ.
ಹಾಗಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಕ್ಕೂಟದ ಡೇರಿ ಘಟಕಗಳ ವೀಕ್ಷಣೆಗೆ ಭೇಟಿ ನೀಡುವುದನ್ನು ಮುಂದೂಡಿ ಸಹಕರಿಸುವಂತೆ ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ ಮನವಿ ಮಾಡಿದ್ದಾರೆ.
Next Story





