ಜಲಸಿರಿ ಯೋಜನೆಗೆ ಮಾಹಿತಿ ನೀಡಲು ಮನವಿ
ಮಂಗಳೂರು, ಮಾ.11:ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ‘ಜಲಸಿರಿ’ ಯೋಜನೆಯಡಿ 247 ಶುದ್ಧ ಕುಡಿಯುವ ನೀರು ಸರಬರಾಜು ನಿರ್ವಹಿಸಲು ಸುಯೆಜ್ ಪ್ರಾಜೆಕ್ಸ್ಟ್ ಪ್ರೈ.ಲಿ ಮತ್ತು ಡಿಆರ್‌ಎಸ್ ಇಂಫ್ರಾಟೆಕ್ ಪ್ರೈಲಿ ಗುತ್ತಿಗೆ ವಹಿಸಿಕೊಂಡಿದೆ.
ಪ್ರಾರಂಭಿಕ ಹಂತದಲ್ಲಿ ನೀರಿನ ಸರಬರಾಜು ಪ್ರಮಾಣವನ್ನು ತಿಳಿಯಲು ನಗರದ ಪ್ರತಿ ಗೃಹಗಳಿಗೆ ಮತ್ತು ಪ್ಲಾಟುಗಳಿಗೆ ಈ ಕಂಪೆನಿಯ ಸಿಬ್ಬಂದಿ ವರ್ಗವಯ ಭೇಟಿ ನೀಡಿ ಮನೆಯಲ್ಲಿರುವವರ ಜನ ಸಂಖ್ಯೆ, ನೀರಿನ ಮೀಟರ್ ಸಂಖ್ಯೆ, ವಿದ್ಯುತ್ ಶಕ್ತಿಯ ಆರ್‌ಆರ್.ಸಂಖ್ಯೆ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಹಾಗಾಗಿ ಸಾರ್ವಜನಿಕರು ಕೆಯುಐಡಿಎಫ್‌ಸಿ ಕಚೇರಿಯ ಗುರುತು ಚೀಟಿಯನ್ನು ಹೊಂದಿರುವ ಸುಯೇಜ್ ಕಂಪೆನಿಯ ಸಿಬ್ಬಂದಿ ವರ್ಗವು ಮನೆಗೆ ಭೇಟಿ ನೀಡಿದಾಗ ಈ ವಿವರಗಳನ್ನು ನೀಡಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.
Next Story





