ಮಾ. 12 ರಿಂದ ಹೆಜಮಾಡಿ ಕೋಡಿ ಉರೂಸ್
ಪಡುಬಿದ್ರಿ: ಬದ್ರಿಯಾ ಜುಮಾ ಮಸ್ಜಿದ್ ಹೆಜಮಾಡಿ ಕೋಡಿ ಸಯ್ಯಿದ್ ಅರಬಿ ವಲಿಯುಲ್ಲಾಹಿ (ಖ.ಸಿ) ರವರ ಉರೂಸ್ ಸಮಾರಂಭ ಮಾರ್ಚ್ 12 ರಿಂದ 14 ರ ವರೆಗೆ ನಡೆಯಲಿದೆ.
ಹಾಜಿ ಅಬುಲ್ ಬುಶ್ರಾ ಕೆ.ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಅವರಿಂದ ಉದ್ಘಾಟಿಸಲಿದ್ದಾರೆ.
ಅಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ನೇತೃತ್ವದಲ್ಲಿ ಸ್ವಲಾತ್ ನಡೆಯಲಿದೆ. ಹಂಝ ಮದನಿ ಮಿತ್ತೂರು ಪ್ರಭಾಷಣ ನಡೆಸಲಿದ್ದಾರೆ. ಮಾ. 13 ರಂದು ಹಂಝ ಮದನಿ ಮಿತ್ತೂರು ದಾರ್ಮಿಕ ಪ್ರವಚನ ನಡೆಸಲಿದ್ದಾರೆ. ಮಾ. 14ರಂದು ಉರೂಸ್ ಸಮಾರಂಭ ನಡೆಯಲಿದೆ.
ಅಸ್ಸಯ್ಯಿದ್ ಅಹ್ದಲ್ ತಂಙಲ್ ಆದೂರು ದುಆ ಆಶೀರ್ವಚನ ನಡೆಸಲಿದ್ದಾರೆ. ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದರು.
Next Story





