ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಗುರಿ ಸಾಧಿಸಿ: ದಿನಕರ ಬಾಬು
ಮಾಸಿಕ ಕೆಡಿಪಿ ಸಭೆ

ಉಡುಪಿ, ಮಾ.11: ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ತಮ್ಮ ಇಲಾಖೆಗೆ ನೀಡಿರುವ ಅನುದಾನ ದಲ್ಲಿ ಸಂಪೂರ್ಣ ಆರ್ಥಿಕ ಮತ್ತು ಭೌತಿಕ ಗುರಿಯನ್ನು ಸಾಧಿಸುವಂತೆ ಜಿಪಂ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಪಂಗಳು ತೆರಿಗೆ ಸಂಗ್ರಹಣೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದ್ದು, ಬಾಕಿ ಇರುವ ಪಂಚಾಯತ್‌ಗಳು ಮಾರ್ಚ್ ಅಂತ್ಯ ದೊಳಗೆ ಸಂಪೂರ್ಣ ಗುರಿ ಸಾಧಿಸುವಂತೆ ಸೂಚಿಸಿದ ದಿನಕರ ಬಾಬು, ವಿವಿಧ ಗ್ರಾಪಂಗಳಲ್ಲಿ ಬಾಕಿ ಇರುವ ಸುಮಾರು 33 ಲಕ್ಷ ರೂ.ಮೊತ್ತದ ವಿದ್ಯುತ್ ಬಿಲ್ಲುಗಳನ್ನು ಶೀಘ್ರದಲ್ಲಿ ಪಾವತಿಸುವ ಕುರಿತಂತೆ ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಶಾಲಾ ಶೌಚಾಲಯಗಳ ನಿರ್ಮಾಣ ಕಾರ್ಯವನ್ನು ಮಾರ್ಚ್ ಅಂತ್ಯ ದೊಳಗೆ ಮುಕ್ತಾಯಗೊಳಿಸುವಂತೆ ಸೂಚಿಸಿದ ದಿನಕರಬಾಬು, ಜನಗಣತಿ ವೇಳೆಯಲ್ಲಿ ಪ್ರತಿ ಮನೆಗಳ ಶೌಚಾಲಯದ ಗಣತಿ ಸಹ ನಡೆಯುವುದರಿಂದ ಬಾಕಿ ಇರುವ ಶೌಚಾಲಯಗಳನ್ನು ಶೀಘ್ರದಲ್ಲಿ ಮುಕ್ತಾಯ ಗೊಳಿಸುವಂತೆ ಮತ್ತು ಹೊಸದಾಗಿ ನಿರ್ಮಾಣಗೊಳ್ಳುವ ಮನೆಗಳಿಗೆ ಕಡ್ಡಾಯವಾಗಿ ಟ್ವಿನ್‌ಪಿಟ್ ಶೌಚಾಲಯಗಳನ್ನು ಅಳವಡಿಸುವ ಬಗ್ಗೆ ಷರತ್ತು ವಿಧಿಸುವಂತೆ ಸೂಚಿಸಿದರು. ವಸತಿ ಯೋಜನೆಯಡಿ ಬ್ಲಾಕ್ ಆಗಿದ್ದ ಮನೆಗಳ ಅಡ್ಡಿಯನ್ನು ತೆರವು ಗೊಳಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಜಿಲ್ಲೆಯ 54 ಗ್ರಾಪಂಗಳಲ್ಲಿ ಒಣಕಸ ಸಂಗ್ರಹಣೆ ನಡೆಯುತ್ತಿದ್ದು, ಉಳಿದ ಪಂಚಾಯತ್‌ಗಳಲ್ಲಿ ಸಹ ಸಂಗ್ರಹಣೆ ಆರಂಭಿಸಲು ಸೂಚನೆ ನೀಡಲಾ ಗಿದೆ. ಹೊಸದಾಗಿ ಘನತ್ಯಾಜ್ಯ ಘಟಕ ಆರಂಭಿಸಲು 53 ಅನುಮೋದನೆ ನೀಡಿದ್ದು, 24 ಪೂರ್ಣಗೊಂಡಿವೆ. 6 ಪ್ರಗತಿಯಲ್ಲಿವೆ ಹಾಗೂ 13 ಟೆಂಡರ್ ಪ್ರಕ್ರಿಯೆ ಯಲ್ಲಿವೆ. ಘಟಕ ಆರಂಭಿಸಲು ಜಾಗದ ಅವಶ್ಯಕತೆಯಿದ್ದಲ್ಲಿ ಗಮನಕ್ಕೆ ತರುವಂತೆ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪ್ರೀತಿ ಗೆಹ್ಲೋಟ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಡಾ.ಆಶೀಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.







