ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವವರ ಪರವಾಗಿ ಪತ್ರಿಕೆಗಳು ಕೆಲಸ ಮಾಡಬೇಕು: ರಮಾನಾಥ ರೈ

ಬಂಟ್ವಾಳ : ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವವರ ಪರವಾಗಿ ಪತ್ರಿಕೆಗಳು ನಿರಂತರ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಮಾಧ್ಯಮಗಳು ಉಳ್ಳವರನ್ನು ಓಲೈಸುವ ಬುಲೆಟಿನ್‍ಗಳಾಗಬಾರದು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಸಂಜೆ ನಡೆದ ಕರಾವಳಿ ಟೈಮ್ಸ್ ಪಾಕ್ಷಿಕದ 5ನೇ ವಾರ್ಷಿಕ ಹಾಗೂ ಪತ್ರಿಕೆಯ ವೆಬ್ ಸೈಟ್ ಆವೃತ್ತಿ ಲೋಕಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ಪತ್ರಿಕೆಗಳು ಜನರ ನೇರ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತದೆ. ದೊಡ್ಡ ಪತ್ರಿಕೆಗಳು ಕೆಲವೊಮ್ಮೆ ಪತ್ರಕರ್ತರ ಅಭಿಪ್ರಾಯವನ್ನು ಮನ್ನಣೆ ನೀಡುತ್ತದೆ ಎಂದು ಹೇಳಲಾಗದು. ಅವುಗಳು ಪತ್ರಿಕಾ ಮಾಲಕರ ಹತೋಟಿಯಲ್ಲಿರುತ್ತದೆ. ಆದರೆ ಸಣ್ಣ ಪತ್ರಿಕೆಗಳು ಜನರ ನೇರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸಣ್ಣ ಪತ್ರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕು ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಪತ್ರಿಕೆಯ ಸಂಚಿಕೆ ಬಿಡುಗಡೆಗೊಳಿಸಿದರು.
ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ಘಟಕಾಧ್ಯಕ್ಷ ಫಾರೂಕ್ ಬಂಟ್ವಾಳ ಶುಭ ಹಾರೈಕೆಯ ಮಾತುಗಳನ್ನಾಡಿದರು.
ಇದೇ ವೇಳೆ ಬಂಟ್ವಾಳ ಪುರಸಭಾ ಮಾಜಿ ಸದಸ್ಯೆ ಚಂಚಲಾಕ್ಷಿ ಅವರನ್ನು ಗಣ್ಯರ ಸಮ್ಮುಖ ಸನ್ಮಾನಿಸಲಾಯಿತು. ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ, ಬಂಟ್ವಾಳ ಹಾಗೂ ಪಾಣೆಮಂಗಳೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಇರಾ ಗ್ರಾ ಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್, ಉದ್ಯಮಿಗಳಾದ ಹಂಝ ಆನಿಯಾ ಬಸ್ತಿಕೋಡಿ, ವಿಶ್ವನಾಥ ಬಂಟ್ವಾಳ, ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಪತ್ರಕರ್ತರಾದ ರತ್ನದೇವ್ ಪೂಂಜಾಲಕಟ್ಟೆ, ಸಂದೀಪ್ ಸಾಲ್ಯಾನ್, ಇಂತಿಯಾಝ್ ಷಾ ತುಂಬೆ, ಪ್ರಮುಖರಾದ ಲತೀಫ್ ಖಾನ್ ಗೂಡಿನಬಳಿ, ಮುಹಮ್ಮದ್ ನಂದಾವರ, ಇರ್ಶಾದ್ ಡಿ.ಎಸ್.ಐ.ಬಿ., ಆಶಿಕ್ ಕುಕ್ಕಾಜೆ, ಶರೀಫ್ ಭೂಯಾ, ಉಬೈದ್ ಯು, ಸಮದ್ ಆಲಡ್ಕ, ಅಝರ್ ಬಂಗ್ಲೆಗುಡ್ಡೆ, ಅಝೀಝ್ ಬಂಗ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹ ಸಂಪಾದಕ ಯು ಮುಸ್ತಫಾ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.










