ವುಹಾನ್‌ನಲ್ಲಿ ಅಗತ್ಯ ಕಂಪೆನಿಗಳಿಂದ ಕೆಲಸ ಪುನರಾರಂಭ: ಚೀನಾ

ಬೀಜಿಂಗ್, ಮಾ. 11: ಕೊರೋನವೈರಸ್ ಪೀಡಿತ ವುಹಾನ್ ನಗರದಲ್ಲಿ ಪ್ರಮುಖ ಕಂಪೆನಿಗಳು ಕೆಲಸವನ್ನು ಪುನರಾರಂಭಿಸಬಹುದು ಎಂದು ಚೀನಾ ಬುಧವಾರ ಪ್ರಕಟಿಸಿದೆ.
ದೈನಂದಿನ ಅಗತ್ಯವಸ್ತುಗಳನ್ನು ಪೂರೈಸುವ, ಸಾಂಕ್ರಾಮಿಕ ರೋಗವನ್ನು ತಡೆಯುವ ಮತ್ತು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಅಥವಾ ಸಾರ್ವಜನಿಕ ಅಗತ್ಯದ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ವುಹಾನ್‌ನಲ್ಲಿ ತಕ್ಷಣ ತಮ್ಮ ಕೆಲಸ ಮತ್ತು ಉತ್ಪಾದನೆಯನ್ನು ಪುನರಾರಂಭಗೊಳಿಸಬಹುದು ಎಂದು ಹುಬೈ ರಾಜ್ಯ ಸರಕಾರ ಬುಧವಾರ ತಿಳಿಸಿದೆ.
ಜಾಗತಿಕ ಕೈಗಾರಿಕಾ ಸಮೂಹಗಳಿಗೆ ಅಗತ್ಯ ಬೇಕಾಗಿರುವ ವುಹಾನ್‌ನ ಕಂಪೆನಿಗಳು ಕೂಡ ಅನುಮೋದನೆ ಪಡೆದು ತಮ್ಮ ಉತ್ಪಾದನೆಯನ್ನು ಮರುಆರಂಭಗೊಳಿಸಬಹುದಾಗಿದೆ ಎಂದು ಸರಕಾರ ತಿಳಿಸಿದೆ.
ಇತರ ಕಂಪೆನಿಗಳು ಮಾರ್ಚ್ 20ರ ನಂತರವಷ್ಟೇ ಉತ್ಪಾದನೆಯನ್ನು ಪುನರಾರಂಭಗೊಳಿಸುವ ಸಾಧ್ಯತೆಯಿದೆ.
ವುಹಾನ್‌ನಲ್ಲಿರುವ ಕಾರು ನಿರ್ಮಾಣ ಕಾರ್ಖಾನೆಗೆ ತನ್ನ ಕೆಲವು ಸಿಬ್ಬಂದಿ ಹೋಗಲು ಆರಂಭಿಸುತ್ತಿದ್ದಾರೆ ಎಂದು ಜಪಾನ್‌ನ ಕಾರು ತಯಾರಕ ಸಂಸ್ಥೆ ಹೊಂಡಾ ಬುಧವಾರ ತಿಳಿಸಿದೆ.
Next Story





