ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಮೈಸೂರು,ಮಾ.11: ಮೈಸೂರಿನ ಹೊರಹೊಲಯದ ವರುಣಾ ಕೆರೆಗೆ ಯುವಕನೋರ್ವ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಭುಗತಗಳ್ಳಿ ನಿವಾಸಿ ಬಸವಣ್ಣ (28) ಎಂದು ಗುರುತಿಸಲಾಗಿದೆ. ಮಾ.10ರ ಮಂಗಳವಾರ ಸಂಜೆ 5 ಗಂಟೆ ಸಮಯದಲ್ಲಿ ಗೆಳೆಯರಿಗೆ ಕರೆ ಮಾಡಿ ಬೇಸರದಿಂದ ಮಾತನಾಡಿದ್ದ ಎನ್ನಲಾಗಿದೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದ. ಆದರೆ ಗೆಳಯರು ಸಮಧಾನ ಹೇಳಿದ್ದರು. ನಿನ್ನೆಯಿಂದ ಆತ ಮನೆಗೆ ಬಂದಿರಲಿಲ್ಲ ಎನ್ನಲಾಗಿದ್ದು ಬುಧವಾರ ಬೆಳಗ್ಗೆ ವರುಣಾ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





