Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು: 'ಜಯಲಕ್ಷ್ಮೀ' ಫ್ಯಾಮಿಲಿ...

ಮಂಗಳೂರು: 'ಜಯಲಕ್ಷ್ಮೀ' ಫ್ಯಾಮಿಲಿ ಫ್ಯಾಶನ್ ಸ್ಟೋರ್ ಶುಭಾರಂಭ

ವಾರ್ತಾಭಾರತಿವಾರ್ತಾಭಾರತಿ12 March 2020 2:25 PM IST
share
ಮಂಗಳೂರು: ಜಯಲಕ್ಷ್ಮೀ ಫ್ಯಾಮಿಲಿ ಫ್ಯಾಶನ್ ಸ್ಟೋರ್ ಶುಭಾರಂಭ

ಮಂಗಳೂರು, ಮಾ.12: ದಕ್ಷಿಣ ಭಾರತದ ಖ್ಯಾತ ಟೈಕ್ಸ್‌ಟೈಲ್ ಬ್ರಾಂಡ್ ‘ಜಯಲಕ್ಷ್ಮೀ’ ಫ್ಯಾಮಿಲಿ ಫ್ಯಾಶನ್ ಸ್ಟೋರ್‌ನ ಮೆಗಾ ಶೋರೂಂ ನಗರದ ಬಿಜೈನಲ್ಲಿ ಗುರುವಾರ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ದೀಪ ಬೆಳಗಿಸಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕೇರಳದಲ್ಲಿ 1947ರಲ್ಲಿ ನರಸಿಂಹ ಕಾಮತ್ ಅವರ ಮೂಲಕ ಸ್ಥಾಪನೆ ಗೊಂಡ ಜಯಲಕ್ಷ್ಮೀ ವಸ್ತ್ರಮಳಿಗೆ ಮಂಗಳೂರಿನಲ್ಲಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ರಾಜ್ಯದಲ್ಲೇ ಅತ್ಯಂತ ದೊಡ್ಡ ಮಳಿಗೆಯನ್ನು ಆರಂಭಿಸಿದೆ. ಇದು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿಗೆ ನೀಡಿದೆ ಕೊಡುಗೆಯಾಗಿದೆ. ಸುಮಾರು 400ರಿಂದ 500 ಜನರಿಗೆ ಉದ್ಯೋಗ ದೊರೆತಿದೆ. ಎಲ್ಲರ ವಿಶ್ವಾಸ ಗಳಿಸಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕ ಜೆ.ಆರ್.ಲೋಬೊ, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.

ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಶಕೀಲಾ ಕಾವ, ಪೂರ್ಣಿಮಾ, ದ.ಕ. ಬಿಜೆಪಿ ಅಧ್ಯಕ್ಷ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕದಲ್ಲೆ ಅತಿದೊಡ್ಡ ಶೋರೂಂ ಆಗಿ ಇದು ಗುರುತಿಸಲ್ಪಡಲಿದ್ದು, 4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್‌ನಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ. ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್ ಕಲೆಕ್ಷನ್ಸ್‌ನಿಂದ ಮಕ್ಕಳ ಉಡುಗೆಗಳವರೆಗೆ, ಅತ್ಯುತ್ತಮ ಮತ್ತು ನೂತನ ಕಲೆಕ್ಷನ್ ಜಯಲಕ್ಷ್ಮೀ ಫ್ಯಾಶನ್‌ನಲ್ಲಿ ಲಭ್ಯವಿದೆ.

ಬಹುಮಹಡಿ ಕಟ್ಟಡದಲ್ಲಿ ಚೂಡಿದಾರ್, ಚೂಡಿದಾರ್ ಮೆಟೀರಿಯಲ್ಸ್‌ಗಳು, ಡ್ರೆಸ್ ಮೆಟೀರಿಯಲ್ಸ್‌ಗಳು, ಎತ್ನಿಕ್ ವೇರ್‌ಗಳು, (ನೆಲ ಮಹಡಿಯಲ್ಲಿ), ಮಕ್ಕಳ ಉಡುಗೆ ತೊಡುಗೆಗಳು, ಪಾಶ್ಚಿಮಾತ್ಯ ಉಡುಗೆ (1ನೇ ಮಹಡಿಯಲ್ಲಿ), ಪುರುಷರ ಉಡುಗೆ ತೊಡುಗೆಗಳು, ಬ್ಲೌಸ್ ಮೆಟೀರಿಯಲ್ಸ್, ಒಳ ಉಡುಪುಗಳು (2ನೇ ಮಹಡಿಯಲ್ಲಿ) ಲೆಹೆಂಗಾ ಮತ್ತು ಸೀರೆಗಳ ಸಂಗ್ರಹ (3ನೇ ಮಹಡಿಯಲ್ಲಿ). ಕಾರು ಪಾರ್ಕಿಂಗ್‌ಗಾಗಿ ನೆಲಮಾಳಿಗೆಯಲ್ಲಿರುವ 2 ಮಹಡಿಗಳನ್ನು ಕಾಯ್ದಿರಿಸಿದ್ದು, ಇಲ್ಲಿ ಸುಮಾರು 250 ವಾಹನಗಳ ಪಾರ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಪುಟ್ಟ ಮಕ್ಕಳಿಗಾಗಿ ಮೋಜನ್ನು ನೀಡುವ ಸಲುವಾಗಿ ಮಕ್ಕಳ ಆಟದ ಸ್ಥಳವನ್ನು ಮೀಸಲಿರಿಲಾಗಿದೆ. ವ್ಯಾಪಕ ಸಂಗ್ರಹದ, ಅತ್ಯುತ್ತಮ ಗುಣಮಟ್ಟದ ಉತ್ತಮ ಶ್ರೇಣಿಯ ಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮೀ ಪ್ರತಿದಿನವು ಶಾಪಿಂಗ್ ಮಾಡುವ ಭರವಸೆಯನ್ನ ನೀಡುತ್ತದೆ. ಜವಳಿ ಕ್ಷೇತ್ರದಲ್ಲಿ ತನ್ನ 7 ದಶಕಗಳ ಪರಿಣತಿ ಹೊಂದಿರುವ ಜಯಲಕ್ಷ್ಮೀ ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಶನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದು, ಪ್ರತಿಯೊಂದು ವಿಭಾಗದ ಜನರ ಅಭಿರುಚಿಯನ್ನು ಪೂರೈಸಲು ಸಜ್ಜಾಗಿದೆ. ನವ ವಿನ್ಯಾಸದೊಂದಿಗೆ ನೂತನ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಿರುವ ವಿಶಾಲವಾದ ಶೋರೂಂ, ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು 500ಕ್ಕೂ ಹೆಚ್ಚು ಹರ್ಷಚಿತ್ತ ಉತ್ಸಾಹಿ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತಾರಾಷ್ಟ್ರೀಯ ಶಾಪಿಂಗ್ ಅನುಭವವನ್ನು ನೀಡುತ್ತದೆ. 

ಜಯಲಕ್ಷ್ಮೀ ಬಗ್ಗೆ

ಜಯಲಕ್ಷ್ಮೀ ಮಳಿಗೆಯನ್ನು 1947ರಲ್ಲಿ ಕೊಚ್ಚಿನ್‌ನ ಕ್ಲೋತ್ ಬಝಾರ್ ರಸ್ತೆಯಲ್ಲಿ ದಿವಂಗತ ಆರ್.ನರಸಿಂಹ ಕಾಮತ್ ಸ್ಥಾಪಿಸಿದರು. ಪ್ರಾರಂಭದಲ್ಲಿ 200 ಚದರ ಅಡಿ ಅಳತೆಯ ಸಣ್ಣ ಅಂಗಡಿಯೊಂದಿಗೆ ವ್ಯವಹಾರವು ಪ್ರಾರಂಭಗೊಂಡಿತು. 1997ರಲ್ಲಿ, ದಿವಂಗತ ಆರ್. ನರಸಿಂಹ ಕಾಮತ್‌ರವರ ಮೂವರು ಪುತ್ರರಾದ ಎನ್.ನಾರಾಯಣ ಕಾಮತ್, ಎನ್.ಗೋವಿಂದ್ ಕಾಮತ್ ಮತ್ತು ಎನ್. ಸತೀಶ್ ಕಾಮತ್, ಎಂಜಿ ರೋಡ್ ಕೊಚ್ಚಿನ್‌ನಲ್ಲಿ 60,000 ಚದರ ಅಡಿ ಅತ್ಯಾಧುನಿಕ ಶೋ ರೂಂ ಅನ್ನು ತೆರೆದರು.

15 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಜಯಲಕ್ಷ್ಮೀ ಬ್ರಾಂಡ್ ಕೇರಳದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಅಲ್ಲದೆ ತಿರುವನಂತಪುರ, ತ್ರಿಶೂರ್ ಮತ್ತು ಕ್ಯಾಲಿಕಟ್‌ನಲ್ಲಿ ಭವ್ಯವಾದ ಶೋ ರೂಂಗಳನ್ನು ತೆರೆಯಿತು. ಇಂದು ಜಯಲಕ್ಷ್ಮೀ ಬ್ರಾಂಡ್ ತನ್ನ ಗುಣಮಟ್ಟದ ಉತ್ಪನ್ನಗಳು, ಅತೀ ಅದ್ಭುತ ಸಂಗ್ರಹಗಳು ಮತ್ತು ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿದೆ.

ಜಯಲಕ್ಷ್ಮೀ ಟೆಕ್ಸ್ ಟೈಲ್ಸ್ ಮಾಲಕರು ಹಾಗೂ ಪಾಲುದಾರರಾದ ಗೋವಿಂದ ಕಾಮತ್, ನಾರಾಯಣ ಕಾಮತ್, ಸತೀಶ್ ಕಾಮತ್ ಅತಿಥಿಗಳನ್ನು ಸ್ವಾಗತಿಸಿದರು. ಮಳಿಗೆಯ ಮಂಗಳೂರು ಶಾಖೆಯ ವ್ಯವಸ್ಥಾಪಕ ರಾಜೇಂದ್ರ ಉಳ್ಳಾಲ್ ವಂದಿಸಿದರು.

ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X