ಧರ್ಮಯುಕ್ತ ಗಳಿಕೆ, ಬಳಕೆ, ಉಳಿಕೆ ರೂಢಿಸಿಕೊಳ್ಳಿ: ಒಡಿಯೂರುಶ್ರೀ ಕರೆ

ಉಪ್ಪಿನಂಗಡಿ, ಮಾ.12: ಅರ್ಥ ಮತ್ತು ಕಾಮಗಳ ಮೇಲಿನ ಅತೃಪ್ತಿಯೇ ಸುಂದರ ಜೀವನಕ್ಕೆ ಮುಳುವಾಗಿ ಪರಿಣಮಿಸುತ್ತದೆ. ಆದ್ದರಿಂದ ನಾವು ಧರ್ಮಯುಕ್ತವಾಗಿ ಗಳಿಸಲು, ಧರ್ಮಯುಕ್ತವಾಗಿ ಬಳಸಲು, ಧರ್ಮಯುಕ್ತವಾಗಿ ಉಳಿಸಲು ಕಲಿಯಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ತಣ್ಣೀರುಪಂಥ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವರು ಮತ್ತು ಪರಿವಾರ ದೇವರುಗಳ ಹಾಗೂ ಸಪರಿವಾರ ದೈವಗಳ ಗುಡಿಗಳು ಜೀರ್ಣೋದ್ಧಾರಗೊಂಡಿದ್ದು, ಬ್ರಹ್ಮಶ್ರೀ ವೇ.ಮೂ. ಬಿ. ಕೇಶವ ಜೋಗಿತ್ತಾಯರು ಬಂಗಲಾಯಿ ಮತ್ತು ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಇದರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ 4ನೇ ದಿನವಾದ ಮಾ.11ರಂದು ರಾತ್ರಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಾವೂರು ಗೋಪಾಲಕೃಷ್ಣ ದೇವಾಲಯದ ಅಧ್ಯಕ್ಷ ಡಾ. ಪ್ರದೀಪ್ ಧಾರ್ಮಿಕ ಉಪನ್ಯಾಸ ನೀಡಿದರು.
ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಮಂಜುನಾಥ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಂಗಳೂರು ವಿವಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಮಾಧವ ಎಂ.ಕೆ., ಕಳಿಯ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ದ.ಕ. ಜಿಲ್ಲಾ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಎ.ಸುರೇಶ್ ರೈ, ವೀರೇಂದ್ರ ಬಲ್ಲಾಳ್ ಬಜಿಲಗುತ್ತು, ಶ್ರೀಮತಿ ಪ್ರಸನ್ನ ಭಂಡಾರಿ, ವೈದ್ಯ ಡಾ.ನಿರಂಜನ್ ರೈ, ಪ್ರಗತಿಪರ ಕೃಷಿಕ ಸುನೀಲ್ ಎ.ಕೆ., ವಾಸ್ತುತಜ್ಞ ಸಂಜೀವ ರೈ, ಕಕ್ಯಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ನಾಯಕ್, ಪುತ್ತಿಲ ಕಲಾಯಗುತ್ತು ಮೋನಪ್ಪ ಪೂಜಾರಿ, ಮುನಿರಾಜ ಅಜ್ರಿ, ತಣ್ಣೀರುಪಂತ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಜಯರಾಜ ಜೈನ್, ಮುನಿರಾಜ ಅಜ್ರಿ, ಮುನಿರಾಜ ಅಜ್ರಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಧವ ಜೋಗಿತ್ತಾಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.
ಅನನ್ಯಾ ಗೌರಿ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿದರು. ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ಅಳಕೆ ವಂದಿಸಿದರು. ಶಿಕ್ಷಕಿ ಪುಷ್ಪಾತಿಲಕ್ ಕಾರ್ಯಕ್ರಮ ನಿರೂಪಿಸಿದರು.







