ಕುಂದಾಪುರ, ಮಾ.12: ನಗರದ ಪ್ರಸಿದ್ಧ ಜಿನಸು ವ್ಯಾಪಾರಿ ಹಾಲಾಡಿ ವಾಸುದೇವ ಕಾಮತ್ ಅವರು ಇಂದು ನಿಧನರಾದರು.
ಇವರಿಗೆ 80 ವರ್ಷ ಪ್ರಾಯವಾಗಿತ್ತು. ಕುಂದಾಪುರ ಉಪಮಾರುಕಟ್ಟೆಯಲ್ಲಿ ಮೆ.ಎಚ್.ವಿ.ಕಾಮತ್ ರಖಂ ಜಿನಸಿ ವ್ಯವಹಾರ ಸಂಸ್ಥೆ ಹೊಂದಿದ್ದ ಇವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.