ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆ: ಎಂಜಿಎಂಗೆ ಬಹುಮಾನದ ಸಿಂಹಪಾಲು

ಉಡುಪಿ, ಮಾ.12:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪದವಿ ವಿದ್ಯಾರ್ಥಿಗಳಿಗಾಗಿ ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ ರಸಪ್ರಶ್ನೆ, ಗಣಿತ ಮಾಡೆಲ್, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ / ಪೈಂಟಿಂಗ್ ಸ್ಪರ್ಧೆಗಳನ್ನು ಆಯೋಜಿಸಿದ್ದು, ಇದರಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಬಹುಪಾಲು ಬಹುಮಾನಗಳನ್ನು ಗೆದ್ದುಕೊಂಡರು.
ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ, ನಂತರ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಬೆಂಗಳೂರಿನ ಯಲಹಂಕ ದಲ್ಲಿರುವ ಅಕಾಡೆಮಿಯಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿತ್ತು.
ರಾಜ್ಯ ಮಟ್ಟದ ಸ್ಪರ್ಧೆಯನ್ನು ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯ ನಟ ಸುಂದರ್ ವೀಣಾ ಮತ್ತು ರೋಹಿಣಿ ರಘುನಂದನ್ ಉದ್ಘಾಟಿಸಿ ದರು. ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ 162 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಹೀಗಿದೆ...
ರಾಜ್ಯ ಮಟ್ಟದ ಸ್ಪರ್ಧೆಯನ್ನು ರಂಗೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯ ನಟ ಸುಂದರ್ ವೀಣಾ ಮತ್ತು ರೋಹಿಣಿ ರಘುನಂದನ್ ಉದ್ಘಾಟಿಸಿದರು. ಎರಡು ದಿನಗಳ ಕಾಲ ನಡೆದ ರ್ಸ್ಪೆಯಲ್ಲಿರಾಜ್ಯದನಾಲ್ಕುವಿಾಗಗಳಿಂದ 162 ವಿದ್ಯಾರ್ಥಿಗಳು ಸ್ಪರ್ಧೆದಲ್ಲಿ ಭಾಗವಹಿಸಿದ್ದರು.
ವಿಜ್ಞಾನ ನಾಟಕ ಸ್ಪರ್ಧೆ: ಪ್ರಥಮ: ಕಾರ್ತಿಕ್ ಮತ್ತು ತಂಡ, ಎಂಜಿಎ ಕಾಲೇಜು ಉಡುಪಿ (ಬೆಳಕಿನೊಂದು ಕಿರಣ- ಮೇರಿಕ್ಯೂರಿ), ದ್ವಿತೀಯ: ಕುಶಲ್ ಮತ್ತು ತಂಡ, ಜೆಎಸ್‌ಎಸ್ ವಾಕ್‌ಶ್ರವಣ ಸಂಸ್ಥೆ, ಕೆಲಗೇರಿ ಧಾರವಾಡ (ಸ್ವಚ್ಛತೆಯ ಹುಚ್ಚು), ತೃತೀಯ: ರೂಪೇಶ್ ಮತ್ತು ತಂಡ, ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ (ವಿ-ಜ್ಞಾನ).
ಅತ್ಯುತ್ತಮ ನಿರ್ದೇಶನ: ಪ್ರಥಮ: ಕಾರ್ತಿಕ್, ಎಂಜಿಎಂ ಉಡುಪಿ, ದ್ವಿತೀಯ: ಕುಶಾಲ್ ಕುಮಾರ್, ಜೆಎಸ್‌ಎಸ್ ವಾಕ್‌ಶ್ರವಣ ಸಂಸ್ಥೆ ಧಾರವಾಡ, ತೃತೀಯ: ರೂಪೇಶ್, ಶ್ರೀಮಹಾವೀರ ಕಾಲೇಜು, ಮೂಡಬಿದ್ರೆ.
ಅತ್ಯುತ್ತಮ ನಟ/ನಟಿ: ಪ್ರಥಮ: ಪಲ್ಲವಿ, ಎಂಜಿಎಂ ಕಾಲೇಜು ಉಡುಪಿ, ದ್ವಿತೀಯ: ರೀತೇಶ್, ಜೆಎಸ್‌ಎಸ್ ವಾಕ್‌ಶ್ರವಣ ಸಂಸ್ಥೆ ಧಾರವಾಡ, ತೃತೀಯ:ಅಕ್ಷತಾ ಬ.ಹಾದಿಮನಿ, ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯ, ಹುಬ್ಬಳ್ಳಿ.
ಅತ್ಯುತ್ತಮ ನಾಟಕ ರಚನೆ/ಕಥೆ: ಪ್ರಥಮ: ಆದರ್ಶ, ಎಂಜಿಎಂ ಕಾಲೇಜು ಉಡುಪಿ, ದ್ವಿತೀಯ: ದೀಪಿಕಾ, ಜೆಎಸ್‌ಎಸ್ ವಾಕ್ ಶ್ರವಣ ಸಂಸ್ಥೆ ಧಾರವಾಡ, ತೃತೀಯ: ಶಾಶ್ವತ್ ಎಸ್ ಶೆಟ್ಟಿ, ಶ್ರೀಮಹಾವೀರ ಕಾಲೇಜು, ಮೂಡಬಿದ್ರೆ.
ಗಣಿತ ರಸಪ್ರಶ್ನೆ: ಪ್ರಥಮ: ಅನುಷಾ ಯು ಮತ್ತು ಚರಿತಾ ಗಣೇಶ್, ಯುನಿವರ್ಸಿಟಿ ವಿಜ್ಞಾನ ಕಾಲೇಜು ತುಮಕೂರು, ದ್ವಿತೀಯ: ಎರೋಲ್ ಪೆರ್ನಾಂಡೀಸ್ ಮತ್ತು ವೈಶಾಕ್ ಸಾಲಿಯಾನ್, ಸಂತ ಅಲೋಸಿಯಸ್ ಕಾಲೇಜು ಮಂಗಳೂರು, ತೃತೀಯ: ಸುಧಾ ಆರ್.ಕುಲಕರ್ಣಿ ಮತ್ತು ಅನಿಲ್ ಕುಾರ್ ಎಸ್ ಮಲೆಕೊಪ್ಪ, ಕೊಪ್ಪಳ.
ಗಣಿತ ಮಾಡೆಲ್: ಪ್ರಥಮ: ಸಾಗರ್ ಎಂ, ವಿಜಯಾ ಕಾಲೇಜ್ ಬಸವನ ಗುಡಿ, ಬೆಂಗಳೂರು, ದ್ವಿತೀಯ: ಸುಧಾಕರ್ ಮ್ಯಾಗಡೆ ಮತ್ತು ವಿನೋದ್ ಮಾನಶೆಟ್ಟಿ, ಜಿ.ಟಿ ಮಹಾವಿದ್ಯಾಲಯ ಮುಂಡರಗಿ, ತೃತೀಯ: ರಮೇಶ್ ಮತ್ತು ಶಿವಪ್ರಸಾದ್, ಸರ್ಕಾರಿ ಪ್ರಮ ದರ್ಜೆ ಕಾಲೇಜು, ಸಿಂಧನೂರು.
ಚಿತ್ರಕಲೆ/ ಡ್ರಾಯಿಂಗ್: ಪ್ರಥಮ: ಅಕ್ಷಯ ಭಂಡಾರಿ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ, ದ್ವಿತೀಯ: ಹರಿಪ್ರಸಾದ್ ಬೋಕರ್, ಎಂಜಿಎಂ ಕಾಲೇಜು ಉಡುಪಿ, ತೃತೀಯ: ಶ್ರೀರಕ್ಷಾ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ.
ಪ್ರಬಂಧ: ಪ್ರಥಮ: ಶ್ರೀನಿವಾಸ ಇ.ಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ, ದ್ವಿತೀಯ: ಶ್ರೀದೇವಿ ಸಿ.ವಿ, ಸುರಾನ ಕಾಲೇಜು ಬೆಂಗಳೂರು, ತೃತೀಯ: ಮಧು ಎಂ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ತುಮಕೂರು.
ಅಕಾಡೆಮಿ ಸಿಇಒ ಡಾ.ಎ.ಎಂ. ರಮೇಶ್, ಕಾರ್ಯಕ್ರಮದ ಸಂಯೋಜಕ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಆನಂದ ಆರ್., ಆಡಳಿತಾಧಿಕಾರಿ ಮಹದೇವ ಗೌಡ ಮತ್ತು ವೈಜ್ಞಾನಿಕ ಅಧಿಕಾರಿ ಶ್ರೀನಿವಾಸ ಉಪಸ್ಥಿತರಿದ್ದರು.







