ಹೆಬ್ರಿ: ಚಂದಿರನ ಬೆಳಕಿನಲ್ಲಿ ಸೈಕಲ್ ಯಾನ

ಹೆಬ್ರಿ, ಮಾ.12: ಹೆಬ್ರಾಯ್ ಸಂಸ್ಥೆಯ ನೇತೃತ್ವದಲ್ಲಿ ಹೆಬ್ರಿ ಬಸ್ ನಿಲ್ದಾಣ ದಿಂದ ಚಾರ ನವೋದಯವರೆಗೆ ಚಂದಿರನ ಬೆಳಕಿನಲ್ಲಿ ಸೈಕಲ್‌ಯಾನ ಕಾರ್ಯ ಕ್ರಮವನ್ನು ಮಾ.10ರಂದು ಹಮ್ಮಿಕೊಳ್ಳಲಾಗಿತ್ತು.
ಬಳಿಕ ಹೆಬ್ರಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಸೌಖ್ಯ ಯೋಗ ಟ್ರಸ್ಟ್‌ನ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ಮಾತನಾಡಿ, ಯೋಗ ಹಾಗೂ ಸೈಕಲ್ ನಲ್ಲಿ ಸಂಚಾರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ವಾಯು ಮಾಲಿನ್ಯ ತಡೆಗಟ್ಟಿ ಉತ್ತಮ ಗಾಳಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೆಬ್ರಾಯ್ ಸಂಸ್ಥೆಯ ಅಧ್ಯಕ್ಷ ನವೀನ್ ಸೋಮಾಯಜಿ ಮಾತನಾಡಿ, ಹೆಬ್ರಾಯ್ ಸಂಸ್ಥೆ ಸೈಕಲ್ ಸವಾರರ ಆರೋಗ್ಯ ಕಾಳಜಿ ಜತೆ ಸಮಾಜದ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿದೆ. ಈಗಾಗಲೇ ಸ್ವಚ್ಛತ ಕಾರ್ಯ ಮೊದಲಾದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದು ಮುಂದೆಯೂ ಆರೋಗ್ಯ ಹಾಗೂ ಸ್ಚಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತದೆ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ರಾಮಚಂದ್ರ ಐತಾಳ್, ಹರ್ಷ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಾಯ್ ಸಂಸ್ಥೆಯ ಕಾರ್ಯದರ್ಶಿ ದಿನಕರ್ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







