ನಿವೇಶನ ರಹಿತರ ಸೇರ್ಪಡೆಗೆ ಎ.15 ಕೊನೆಯ ದಿನ
ಉಡುಪಿ, ಮಾ.12: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ)ಯಡಿ ಯಲ್ಲಿ ಸಾಮಾಜಿಕ, ಆರ್ಥಿಕ, ಜಾತಿ ಗಣತಿ 2011ರ ಶಾಶ್ವತ ಪಟ್ಟಿಗೆ ಕೈಬಿಟ್ಟು ಹೋದ ಅರ್ಹ ನಿವೇಶನ ರಹಿತರನ್ನು ಗುರುತಿಸಿ ಮಾಹಿತಿಯನ್ನು ನಿಗಮದ ವೆಬ್‌ಸೈಟ್‌ನಲ್ಲಿ ಅಳವಡಿಸಲು ಎಪ್ರಿಲ್ 15 ಕೊನೆಯ ದಿನವಾಗಿರುತ್ತದೆ.
ನಿವೇಶನ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಈ ಪಟ್ಟಿಯಲ್ಲಿರುವ ಫಲಾನುವಿಗಳನ್ನು ಮಾತ್ರ ಆಯ್ಕೆ ಮಾಡಬೇಕಾಗಿ ರುವುದರಿಂದ ಅರ್ಹ ನಿವೇಶನ ರಹಿತರು ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯತ್‌ನ್ನು ಸಂಪರ್ಕಿಸುವಂತೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





