ಇಲಿ ಪಾಷಣ ಸೇವಿಸಿ ಯುವಕ ಮೃತ್ಯು
ಉಡುಪಿ, ಮಾ.12: ಯುವಕನೋರ್ವ ಅಕಸ್ಮಿಕವಾಗಿ ಇಲಿ ಪಾಷಣವನ್ನು ಸೇವಿಸಿ ಮೃತಪಟ್ಟ ಘಟನೆ ಉಡುಪಿಯ ಸಂತೆಕಟ್ಟೆ ಪಟ್ಟುಕೆರೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಟ್ಟುಕೆರೆ ವಿಶಾಲನಗರದ ಬರಮಪ್ಪ ಕಂಚಿಗಿಡದ ಎಂಬವರ ಮಗ ಕೃಷ್ಣ(20) ಎಂದು ಗುರುತಿಸಲಾಗಿದೆ. ಇವರು ಮಾನಸಿಕ ಖಿನ್ನತೆ ಯಿಂದ ಮಾ.10ರಂದು ಮನೆಯಲ್ಲಿ ಆಕಸ್ಮಿಕವಾಗಿ ಇಲಿ ಪಾಷಣವನ್ನು ಸೇವಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು, ಮಾ.12ರಂದು ನಸುಕಿನ ವೇಳೆ 12.45ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





