ಉಡುಪಿ ರಥಬೀದಿ ಆಟೋ ಚಾಲಕರು, ಮಾಲಕರ ಸಂಘ: ಪದಾಧಿಕಾರಿಗಳ ಆಯ್ಕೆ

ನಾಗೇಶ್
ಉಡುಪಿ, ಮಾ.12: ಉಡುಪಿ ರಥಬೀದಿ ಆಟೋ ಚಾಲಕರು ಹಾಗೂ ಮಾಲಕರ ಸಂಘದ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಗೇಶ್ ಡಿ.ನಾಯಕ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ವೆಂಕಟೇಶ್ ಪೈ, ಉಪಾಧ್ಯಕ್ಷರಾಗಿ ಹರೀಶ್ ಡಿ.ಅಂಚನ್, ಸದಾಶಿವ ಪೂಜಾರಿ ದೆಂದೂರುಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಕಾಮತ್ ಮರ್ಣೆ, ಜಂಟಿ ಕಾರ್ಯದರ್ಶಿಯಾಗಿ ರಾಘವೇಂದ್ರ ಬಿ.ಜಿ., ಕೋಶಾಧಿಕಾರಿಯಾಗಿ ಸಂತೋಷ್ ಚಿಟ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ನಾಯ್ಕ್ ದೊಡ್ಡಣಗುಡ್ಡೆ, ಗೌರವ ಸಲಹೆಗಾರರಾಗಿ ಶಂಕರ್ ಶೇರಿಗಾರ್, ಗೋವಿಂದ ಶೇರಿಗಾರ್, ಶ್ರೀಧರ ನಾಯಕ್, ರಘುರಾಮ ಭಟ್, ವೆಂಕಟರಮಣ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
Next Story





