ನೆಪ್ಚೂನ್ ಗೂ ಆಚೆ 139 ಹೊಸ ಆಕಾಶಕಾಯಗಳ ಪತ್ತೆ

ವಾಶಿಂಗ್ಟನ್, ಮಾ. 12: ಸೌರವ್ಯೂಹದ ಕೊನೆಯ ಗ್ರಹ ನೆಪ್ಚೂನ್‌ನ ಆಚೆಗೆ 139 ಹೊಸ ಆಕಾಶಕಾಯಗಳನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಇದರೊಂದಿಗೆ ಈ ಮಾದರಿಯ ಆಕಾಶಕಾಯಗಳನ್ನು ಪತ್ತೆಹಚ್ಚುವ ಹೊಸ ವಿಧಾನವೊಂದನ್ನೂ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ ಎಂದು ‘ದಿ ಆ್ಯಸ್ಟ್ರೋಫಿಸಿಕಲ್ ಜರ್ನಲ್ ಸಪ್ಲಿಮೆಂಟ್ ಸೀರೀಸ್’ನಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದು ತಿಳಿಸಿದೆ. ಈ ಹೊಸ ವಿಧಾನವು ಮುಂದಿನ ದಿನಗಳಲ್ಲಿ ಕಾಲ್ಪನಿಕ ‘ಒಂಬತ್ತನೇ ಗ್ರಹ’ ಹಾಗೂ ಇತರ ಪತ್ತೆಯಾಗದ ಗ್ರಹಗಳ ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದೆ.
‘‘ನೆಪ್ಚೂನ್‌ನ ಆಚೆಗೆ ಇರುವ ಆಕಾಶದಲ್ಲಿ ಎಷ್ಟು ಆಕಾಶಕಾಯಗಳನ್ನು ಪತ್ತೆಹಚ್ಚಬಹುದು ಎನ್ನುವುದು ಎಷ್ಟು ಪ್ರಮಾಣದ ಆಕಾಶವನ್ನು ನೋಡಬಹುದು ಹಾಗೂ ಎಷ್ಟು ಅತ್ಯಂತ ಅಸ್ಪಷ್ಟ ವಸ್ತುಗಳನ್ನು ಕಾಣಬಹುದು ಎನ್ನುವುದನ್ನು ಅವಲಂಬಿಸಿದೆ’’ ಎಂದು ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗ್ಯಾರಿ ಬರ್ನ್‌ಸ್ಟೀನ್ ಹೇಳುತ್ತಾರೆ.
Next Story





