ಸ್ಪೇನ್: ಸಚಿವೆಗೆ ಕೊರೋನವೈರಸ್

ಮ್ಯಾಡ್ರಿಡ್ (ಸ್ಪೇನ್), ಮಾ. 12: ಸ್ಪೇನ್‌ನ ಸಮಾನತೆ ಸಚಿವೆ ಕೊರೋನವೈರಸ್ ಸೋಂಕಿಗೆ ಗುರಿಯಾಗಿದ್ದಾರೆ ಹಾಗೂ ಅವರನ್ನು ಅವರ ಸಂಗಾತಿ, ಉಪ ಪ್ರಧಾನಿ ಪಾಬ್ಲೊ ಇಗ್ಲೇಸಿಯಸ್ ಜೊತೆಗೆ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ ಎಂದು ಸರಕಾರ ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಸಚಿವೆ ಐರೀನ್ ಮೊಂತೇರೊರ ಆರೋಗ್ಯ ಪರಿಸ್ಥಿತಿ ಉತ್ತಮವಾಗಿದೆ ಹಾಗೂ ಎರಡನೇ ಉಪ ಪ್ರಧಾನಿ ಪಾಬ್ಲೊ ಇಗ್ಲೇಸಿಯಸ್‌ರನ್ನೂ ಇತರರಿಂದ ಪ್ರತ್ಯೇಕಿಸಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ.
‘‘ಸರಕಾರದ ಎಲ್ಲ ಸದಸ್ಯರು ಕೊರೋನವೈರಸ್ ಪರೀಕ್ಷೆಗೆ ಒಳಗಾಗಲಿದ್ದಾರೆ’’ ಎಂದು ಅದು ತಿಳಿಸಿದೆ.
ನೋವೆಲ್-ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯಲು ಮ್ಯಾಡ್ರಿಡ್ ಸೇರಿದಂತೆ ಸ್ಪೇನ್‌ನ ಹಲವು ಭಾಗಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
Next Story





