ಭಟ್ಕಳ: ಹಾಡುಹಗಲೇ ಕಾರಿನಲ್ಲಿದ್ದ ವ್ಯಕ್ತಿಯ ಸರ ಕಳವು
ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-66ರ ಜಾಗಟೆಬೈಲ್ ಸಮೀಪ ಚಿಲ್ಲಿಸ್ ಹೊಟೇಲ್ ಎದುರು ಸ್ಕೂಟರ್ ನಲ್ಲಿ ಬಂದ ಮೂವರ ತಂಡ ಕಾರು ಚಲಾಯಿಸಿಕೊಂಡು ಶಿರೂರಿನಿಂದ ಶಿರಾಲಿಗೆ ಹೋಗುತ್ತಿದ್ದ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತು ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಸರ ಕಳೆದುಕೊಂಡ ವ್ಯಕ್ತಿ ಶಿರಾಲಿಯ ಮೂಡಶಿರಾಲಿ ಗ್ರಾಮದ ಜಗದೀಶ ಮಾದೇವ ನಾಯ್ಕ ಎಂದು ತಿಳಿದು ಬಂದಿದೆ.
ಜಗದೀಶ ತನ್ನ ಕುಟುಂಬದವರೊಂದಿಗೆ ಶಿರೂರುನಿಂದ ತನ್ನ ಕಾರಿನಲ್ಲಿ ಶಿರಾಲಿ ಮನೆಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-66ರ ಜಾಗಟೆಬೈಲ್ ಸಮೀಪ ಸ್ಕೂಟರ್ ನಲ್ಲಿ ಬಂದ ಮೂವರು ಕಾರಿನ ಎದುರು ನಿಧಾನ ಬಂದ ನಿಲ್ಲಿಸಲು ಯತ್ನಿಸಿದ್ದ ವೇಳೆ ಕಾರನ್ನು ನಿಧಾನ ಮಾಡಿ ಪಕ್ಕಕ್ಕೆ ಕಾರು ಚಲಾಯಿಸಿಬೇಕೆನ್ನುವಷ್ಟರಲ್ಲಿ ಮೂವರ ಪೈಕಿ ಓರ್ವ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿದ್ದಾನೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಗದೀಶ ನಾಯ್ಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Story





