ಬೆಂಗಳೂರು: ಶನಿವಾರ 15 ಕಡೆಗಳಲ್ಲಿ ಜಲಸ್ಪಂದನ ಕಾರ್ಯಕ್ರಮ
ಬೆಂಗಳೂರು, ಮಾ.12: ಜಲಮಂಡಳಿಯಿಂದ ಸಾರ್ವಜನಿಕರ ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ನಿವಾರಿಸಲು ನಗರದ 15 ಕಡೆಗಳಲ್ಲಿ ಶನಿವಾರ(ಮಾ.14) ಜಲಸ್ಪಂದನ ಕಾರ್ಯಕ್ರಮ ನಡೆಯಲಿದೆ.
ಪ್ರಧಾನ ಮುಖ್ಯ ಅಭಿಯಂತರರು ಮತ್ತು ಅಪರ ಮುಖ್ಯ ಅಭಿಯಂತರರುಗಳ ಸಮ್ಮುಖದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. 15 ಭಾಗಗಳ ಪೈಕಿ ಒಂದರಲ್ಲಿ ಜಲಮಂಡಳಿ ಅಧ್ಯಕ್ಷ ತುಷಾರ್‌ಗಿರಿನಾಥ್ ಪಾಲ್ಗೊಳ್ಳಲಿದ್ದಾರೆ.
ಕಾನಿಅ(ವಾಯವ್ಯ-2): ಎಂ.ಇ.ಐ ಲೇಔಟ್, ಪೀಣ್ಯ, ಹೆಗ್ಗನಹಳ್ಳಿ ಸುತ್ತಮುತ್ತಲಿನ ಪ್ರದೇಶ: ಪೀಣ್ಯ ದಾಸರಹಳ್ಳಿ ಸೇವಾ ಠಾಣೆ, ನಂ. 06, 100 ಅಡಿ ರಸ್ತೆ, ಫೋರೆಸ್ಸ್ ಕಂಪನಿ ಎದುರು, ಟಿ.ವಿ.ಎಸ್.ಕ್ರಾಸ್, 1ನೇ ಹಂತ, ಪೀಣ್ಯದಲ್ಲಿ ನಡೆಯಲಿದೆ.
ದಾಸರಹಳ್ಳಿ, ಆರ್.ಆರ್.ನಗರ (110 ಹಳ್ಳಿಗಳು): ಇಡಬ್ಲೂ ಕಾಲೇಜ್ ಮುಖ್ಯ ರಸ್ತೆ, ಬಿ.ಇ.ಎಲ್ ಬಡಾವಣೆ, 1 ನೇ ಹಂತ, ಬೇಡರಹಳ್ಳಿ.
ಬೊಮ್ಮನಹಳ್ಳಿ ವ್ಯಾಪ್ತಿ(110 ಹಳ್ಳಿಗಳು): ಕೂಡ್ಲು ಜಿ.ಎಲ್.ಆರ್., ಅಮೃತ ಕಾಲೇಜು ಸಮೀಪ, ಜೈಲ್ ರಸ್ತೆ.
ಮಹಾದೇವಪುರ ವ್ಯಾಪ್ತಿ(110 ಹಳ್ಳಿಗಳು): 9 ಎಂ.ಎಲ್.ಡಿ. ಜಿ.ಎಲ್.ಆರ್. ಆವರಣ, ಹೂಡಿ, ಕುಂದಲಹಳ್ಳಿ, ಹೂಡಿ ಮುಖ್ಯ ರಸ್ತೆ.
ಬ್ಯಾಟರಾಯನಪುರ ವ್ಯಾಪ್ತಿ(110 ಹಳ್ಳಿಗಳು) ಬೆಂ.ಜ.ಮಂ.ಪಿನಾಕಿನಿ ಭವನ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಯಲಹಂಕ ಉಪನಗರ.
ಕಾನಿಅ(ಆಗ್ನೇಯ-1): (ಹಲಸೂರು, ಇಂದಿರಾನಗರ, ವಿಜ್ಞಾನ ನಗರ ಸುತ್ತಮುತ್ತಲಿನ ಪ್ರದೇಶ): ಸಕಾನಿಅ ಕಚೇರಿ(ಆಗ್ನೇಯ-2) 10ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಎಚ್.ಎ.ಎಲ್ 2ನೇ ಹಂತ.
ಕಾನಿಅ(ವಾಯವ್ಯ-1): (ರಾಜಾಜಿನಗರ, ಕಾಮಾಕ್ಷಿಪಾಳ್ಯ, ನಾಗರಭಾವಿ, ಮಹಾಲಕ್ಷ್ಮಿ ಲೇಔಟ್, ಸುತ್ತಮುತ್ತಲಿನ ಪ್ರದೇಶ): ಸಕಾನಿಅ (ಪಶ್ಚಿಮ-2) ಕಚೇರಿ, 80 ಅಡಿ ರಿಂಗ್ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, 2ನೇ ಹಂತ ನಾಗರಭಾವಿ.
ಕಾನಿಅ(ಈಶಾನ್ಯ) (ಮಲ್ಲೇಶ್ವರಂ, ಜಯಮಹಲ್, ಆರ್.ಟಿ.ನಗರ್, ಕುಮಾರಪಾರ್ಕ್ ಸುತ್ತಮುತ್ತಲಿನ ಪ್ರದೇಶ):ಬೆಂ.ಜ.ಮಂ.ಸಕಾನಿಅ ಕಚೇರಿ, (ಈಶಾನ್ಯ-2) ಕುಮಾರ ಪಾರ್ಕ್, 9ನೇ ಅಡ್ಡರಸ್ತೆ, ರೈಲ್ವೆ ಪ್ಯಾರಲೆಲ್ ರಸ್ತೆ.
ಕಾನಿಅ(ನೈರುತ್ಯ) (ವಿ.ವಿ.ಪುರಂ, ಕತ್ರಿಗುಪ್ಪೆ, ಎಂ.ಎನ್.ಕೆ ಪಾರ್ಕ್, ಚಾಮರಾಜಪೇಟೆ ಸುತ್ತಮುತ್ತಲಿನ ಪ್ರದೇಶ):ಸಕಾನಿಅ(ನೈರುತ್ಯ-2) ಕಚೇರಿ, ಬನಗಿರಿನಗರ, ಬಿ.ಎಸ್.ಕೆ. 3ನೇ ಹಂತ.
ಕಾನಿಅ(ಆಗ್ನೇಯ-2) (ಬಿ.ಟಿ.ಎಂ., ಜಯನಗರ, ಕೋರಮಂಗಲ ಸುತ್ತಮುತ್ತಲಿನ ಪ್ರದೇಶ): ಬೆಂ.ಜ.ಮಂ. ಜಯನಗರ ಸೇವಾಠಾಣೆ, 27ನೇ ಅಡ್ಡರಸ್ತೆ, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ ವಾಟರ್ ಟ್ಯಾಂಕ್.
ಕಾನಿಅ(ಪೂರ್ವ) (ಎಚ್.ಬಿ.ಆರ್. ಹೂಡಿ, ಎ.ಇ.ಸಿ.ಎಸ್. ಲೇ ಔಟ್ ಕೆ.ಆರ್.ಪುರಂ. ಸುತ್ತಮುತ್ತಲಿನ ಪ್ರದೇಶ): ಬೆಂ.ಜ.ಮಂ. ಜಿ.ಎಲ್.ಆರ್. ಆವರಣ, ಗ್ರಾಫೈಟ್ ಇಂಡಿಯಾ ಎದುರು ಕುಂದಲಹಳ್ಳಿ ಮುಖ್ಯ ರಸ್ತೆ, ವೈಟ್‌ಫೀಲ್ಡ್.
ಕಾನಿಅ(ಉತ್ತರ) (ಯಲಹಂಕ, ಸಹಕಾರ ನಗರ, ವಿದ್ಯಾರಣ್ಯಪುರ ಸುತ್ತಮುತ್ತಲಿನ ಪ್ರದೇಶ): ಕಾನಿಅ, ಪಿನಾಕಿನಿ ಭವನ, 2ನೇ ಮಹಡಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಯಲಹಂಕ ಉಪನಗರ.
ಕಾನಿಅ(ಕೇಂದ್ರ): (ಚಿಕ್ಕ ಲಾಲ್‌ಬಾಗ್, ಹೈಗೌಂಡ್ಸ್, ಫ್ರೇಜರ್ ಟೌನ್, ಸುತ್ತಮುತ್ತಲಿನ ಪ್ರದೇಶ): ಕಾನಿಅ ಕಚೇರಿ ಅವರಣ ಮಿಲ್ಲರ್ಸ್ ರಸ್ತೆ, ಹೈಗ್ರೌಂಡ್ಸ್.
ಕಾನಿಅ(ಪಶ್ಚಿಮ) (ಮೈಸೂರು ರಸ್ತೆ, ಜಯನಗರ, ಚಂದ್ರಲೇಔಟ್, ಆರ್.ಆರ್.ನಗರ, ಸುತ್ತಮುತ್ತಲಿನ ಪ್ರದೇಶ): ಬೆಂ.ಜ.ಮಂ. ಜಯನಗರ ಓ.ಎಚ್.ಟಿ. ಸೇವಾಠಾಣೆ, ಎಂಸಿ ಲೇಔಟ್, ಜಯನಗರ.
ಕಾನಿಅ(ದಕ್ಷಿಣ) (ಬನಶಂಕರಿ, ಕೊತ್ತನೂರು ದಿಣ್ಣೆ, ಎಚ್.ಎಸ್.ಆರ್. ಸುತ್ತಮುತ್ತಲಿನ ಪ್ರದೇಶ): ಬನಶಂಕರಿ ಸೇವಾಠಾಣೆ, ಬನಶಂಕರಿ ದೇವಸ್ಥಾನದ ಹಿಂಭಾಗ.







