ಮಾ.15ರಂದು ಕುಪ್ಪೆಟ್ಟಿಯಲ್ಲಿ ಮಜ್ಲಿಸುನ್ನೂರು, ಅನುಸ್ಮರಣಾ ಸಮ್ಮೇಳನ
ಬೆಳ್ತಂಗಡಿ, ಮಾ.13: ಎಸ್ಕೆಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್. ಇದರ ಜಂಟಿ ಆಶ್ರಯದಲ್ಲಿ 10ನೇ ವಾರ್ಷಿಕೋತ್ಸವದ ಪ್ರಯುಕ್ತ ವಾರ್ಷಿಕ ಮಜ್ಲಿಸುನ್ನೂರು ಹಾಗೂ ಶಂಸುಲ್ ಉಲಮಾ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ ಮಾ.15ರಂದು ಮಗ್ರಿಬ್ ನಮಾಜ್ ಬಳಿಕ ಕುಪ್ಪೆಟ್ಟಿ ಜಂಕ್ಷನ್ ನಲ್ಲಿ ನಡೆಯಲಿದೆ.
ಖ್ಯಾತ ವಾಗ್ಮಿ ಮುಹಮ್ಮದ್ ಹನೀಫ್ ನಿಝಾಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಅಸ್ಸೈಯದ್ ಝೈನುಲ್ ಆಬೀದೀನ್ ಜಿಫ್ರೀ ತಂಙಳ್ ಪೋಸೊಟು ದುಆಗೈಯುವರು. ಹಲವಾರು ಸಾದಾತುಗಳು, ಉಲಮಾಗಳು, ಸೂಫೀವರ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





