ಶಂಕಿತ ಕೊರೋನ ವೈರಸ್: ಸಾಗರದ ಮಹಿಳೆಗೆ ಮತ್ತೊಮ್ಮೆ ಪರೀಕ್ಷೆ
ಮಣಿಪಾಲ, ಮಾ.13: ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಸಾಗರ ತಾಲೂಕು ಆನಂದಪುರದ 68ರ ಹರೆಯದ ಮಹಿಳೆಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಇಂದು ಮತ್ತೊಮ್ಮೆ ಶಿವಮೊಗ್ಗ ದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈಗಾಗಲೇ ಶಿವಮೊಗ್ಗ ದಲ್ಲಿ ಒಮ್ಮೆ ಹಾಗೂ ಮಣಿಪಾಲದಲ್ಲಿ ನಡೆಸಿದ ಮಾದರಿಗಳ ಪರೀಕ್ಷಾ ವರದಿ ನೆಗೆಟೀವ್ ಆಗಿ ಬಂದಿದ್ದರೂ, ಮಹಿಳೆಯಲ್ಲಿ ಮತ್ತೆ ರೋಗ ಲಕ್ಷಣ ಕಾಣಿಸಿಕೊಂಡಿರುವುದರಿಂದ ಇನ್ನೊಂದು ಪರೀಕ್ಷೆಗಾಗಿ ಮಾದರಿಗಳನ್ನು ಕಳುಹಿಸಲಾಗಿದೆ ಎಂದವರು ವಿವರಿಸಿದರು.
Next Story





