ಆಸ್ಟ್ರೋ ಮೋಹನ್ ಛಾಯಾಚಿತ್ರಕ್ಕೆ ಚಿನ್ನದ ಪದಕ

ಉಡುಪಿ, ಮಾ.13: ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಸಂಸ್ಥೆಯಿಂದ ಮಾನ್ಯತೆ ಪಡೆದ ಫೋಟೋಮ್ಯಾಜಿಕ್, ಒಮ್ನಿಕ್ ಆರ್ಟ್ ಫೌಂಡೇಶನ್‌ನ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ (ಸರ್ಕಿಟ್) ಛಾಯಾಚಿತ್ರ ಸ್ಪರ್ಧೆಯಲ್ಲಿ ಹಿರಿಯ ಪತ್ರಿಕಾ ಛಾಯಾ ಗ್ರಾಹಕ ಆಸ್ಟ್ರೋ ಮೋಹನ್ ಅವರ ‘ಕಂಬಳ’ ಚಿತ್ರಕ್ಕೆ ಸ್ವರ್ಣಪದಕಲಭಿಸಿದೆ.
ಪೋಟೊ ಟ್ರಾವಲ್ ವಿಭಾಗದಲ್ಲಿ ‘ಚೇಸಿಂಗ್’ ಶೀರ್ಘಿ ಕಂಬಳದ ಚಿತ್ರ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಇದೇ ಸ್ಪರ್ಧೆಯಲ್ಲಿ ಆಸ್ಟ್ರೋ ಅವರ ಇನ್ನೂ ಆರು ಚಿತ್ರಗಳು ಸ್ವೀಕೃತಿಯನ್ನು ಪಡೆದಿವೆ.
Next Story





