ಮಾ.15ರಂದು ಹಿಂದೂ ಜನಸಂಘ ಕರ್ನಾಟಕ ಉದ್ಘಾಟನೆ
ಉಡುಪಿ, ಮಾ.13: ಹಿಂದೂ ಜನಸಂಘ ಕರ್ನಾಟಕ ಇದರ ಉದ್ಘಾಟನಾ ಸಮಾರಂಭವನ್ನು ಮಾ.15ರಂದು ಬೆಳಗ್ಗೆ 9:30ಕ್ಕೆ ಕಿನ್ನಿಮುಲ್ಕಿಯ ವೀರಭದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನಸಂಘದ ಸಂಸ್ಥಾಪಕಿ ಅಂಬಿಕಾ ವಿ.ಪ್ರಭು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದ ಮಾತನಾಡಿದ ಅವರು, ಶ್ರೀರಾಮಸೇನೆ ಕರ್ನಾಟಕ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಉದ್ಘಾಟಿಸಲಿರುವರು. ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಪ್ರಮುಖ ಪ್ರವೀಣ್ ವಾಲ್ಕೆ, ಹಿಂದು ಜನಜಾಗೃತಿ ಸಮಿತಿಯ ಸಮನ್ವಯಕ ವಿಜಯ ಕುಮಾರ್ ಮೊದಲಾದವರು ಭಾಗವಹಿಸಲಿರುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರದೀಪ್ ಬೇಳಾಡಿ, ಶರತ್‌ರಾಜ್, ವಿನೋದ್ ಕರ್ಕೇರ, ರಾಮಾಂಜಿ, ಸಂಪತ್ ಎಸ್.ಜೆ. ಉಪಸ್ಥಿತರಿದ್ದರು.
Next Story





