ಭಾರತ ಸೇವಾದಳ ಉಡುಪಿ ಜಿಲ್ಲಾ ಮಟ್ಟದ ಸಹಾಯಕ ಶಿಕ್ಷಣ ಶಿಬಿರ ಸಮಾರೋಪ

ಕಾಪು, ಮಾ.13: ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಸ್ತು, ಸಂಯಮ, ಧೈರ್ಯ, ಸಹನೆಯ ಗುಣಗಳನ್ನು ಕಲಿಸಬೇಕು. ಸೇವಾದಳದ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ದೇಶಪ್ರೇಮ ಜಾಗೃತಗೊಳಿಸಬೇಕು. ಭಾರತ ಸೇವಾದಳ ಚಟುವಟಿಕೆಗಳು ನಮ್ಮ ಜಿಲ್ಲೆ ಯಲ್ಲಿ ಮುಂಚೂಣಿಗೆ ಬರಬೇಕಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ದೇಶಪ್ರೇಮದ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಭಾರತ ಸೇವಾದಳ ಜಿಲ್ಲಾ ಸಮಿತಿ ಉಡುಪಿ, ಉಡುಪಿ ಜಿಲ್ಲಾ ಪಂಚಾ ಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಭಾರತ ಸೇವಾದಳ ಉಡುಪಿ ಇದರ ವತಿಯಿಂದ ಶಿಕ್ಷಕರಿಗಾಗಿ ಎಂಟು ದಿನಗಳ ಕಾಲ ಇತ್ತೀಚೆಗೆ ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿ ಕೊಳ್ಳಲಾದ ಜಿಲ್ಲಾ ಮಟ್ಟದ ಸಹಾಯಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ಮಕ್ಕಳಿಗೆ ಬಾಲ್ಯ ದಿಂದಲೇ ದೇಶಭಕ್ತರ, ಹೋರಾಟಗಾರರ ತ್ಯಾಗ, ಬಲಿದಾನ, ಗೆಲುವಿನ ಸಾಧನೆಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಇವುಗಳನ್ನು ಪಠ್ಯದಲ್ಲಿ ಅಳವಡಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಕಾಪು ಪುರಸಭಾ ಸದಸ್ಯ ಉಸ್ಮಾನ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿಬಿರಾಧಿಪತಿಯಾಗಿ ಸೇವೆ ನೀಡಿದ ಭಾರತ ಸೇವಾದಳ ಬೆಳಗಾವಿ ವಿಭಾಗ ಸಂಘಟಕ ಕಾಶೀನಾಥ್ ಬಿ.ಹಂದ್ರಾಳ್, ಸಹಶಿಬಿರಾಧಿಪತಿಯಾಗಿ ಸೇವೆ ನೀಡಿದ ಬಾರತ ಸೇವಾದಳ ವಿಜಯಪುರ ವಲಯ ಸಂಘಟಕ ನಾಗೇಶ್ ಡೊಣ್ಣೂರು, ಶಿಬಿರದ ಕಾರ್ಯದರ್ಶಿ ಪಕ್ಕೀರಗೌಡ ಹಳಮನಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಭಾರತ ಸೇವಾದಳ ಉಡುಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ರಾದ ಗಿರೀಶ್ ಅಂಚನ್, ಬಿ.ಪುಂಡಲೀಕ ಮರಾಠೆ ಶಿರ್ವ, ಭಾರತ ಸೇವಾದಳ ಕಾಪು ತಾಲೂಕು ಅಧ್ಯಕ್ಷ ಮಧುಕರ್ ಎಸ್., ಬ್ರಹ್ಮಾವರ ತಾಲೂಕು ಕಾರ್ಯದರ್ಶಿ ದಿನಕರ ಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ದೇವಾಡಿಗ, ಗಣಪತಿ ನಾರಿ ಬ್ರಹ್ಮಾವರ, ಸುರೇಶ್ ಪಂಚನಬೆಟ್ಟು, ಅಬ್ದುಲ್ ರಜಾಕ್ ಬೆಳಪು, ಅಧಿನಾಯಕಿಯರುಗಳಾದ ರಾಜೇಶ್ವರೀ ಅಮೀನ್, ಭಾರತಿ ಮಂಜು ನಾಥ್ ನಾಯಕ್ ಅಂಡಾರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಭಾರತ ಸೇವಾದಳ ಉಡುಪಿ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿದರು. ತಾಲೂಕು ಅಧಿನಾಯಕ ಸತ್ಯಸಾಯಿ ಪ್ರಸಾದ್ ಗೌರವ ವಂದನೆ ಸಲ್ಲಿಸಿದರು. ಜಿಲ್ಲಾ ಸಂಘಟಕ ಪಕ್ಕೀರಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ದೇವಾಡಿಗ ವಂದಿಸಿದರು.







