ರಾಷ್ಟ್ರಮಟ್ಟದ ಕಾಲ್ಪೋಸ್ಕೋಪಿ ಕಾರ್ಯಾಗಾರ

ಉಡುಪಿ, ಮಾ.13: ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ವಿವಿಧ ಕಡೆಗಳಲ್ಲಿ ಏರ್ಪಡಿಸಲಾದ ಗರ್ಭಾಶಯದ ಕೊರಳಿನ ಮತ್ತು ಸ್ತನ ಕ್ಯಾನ್ಸರ್‌ನ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರದ ಪ್ರಾಥಮಿಕ ಪರೀಕ್ಷೆಯಲ್ಲಿ ಆಯ್ಕೆಗೊಂಡ 50ಕ್ಕೂ ಹೆಚ್ಚು ರೋಗಿಗಳಿಗೆ ಮುಂದಿನ ಹಂತದ ಪರೀಕ್ಷೆಗಾಗಿ ಅನ್ವೇಷ ಕಾರ್ಯಾಗಾರ ಇತ್ತೀಚೆಗೆ ಜರಗಿತು.
ಅಧ್ಯಕ್ಷತೆಯನ್ನು ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಅಧ್ಯಯನ ಕೇಂದ್ರದ ಡೀನ್ ಡಾ.ನಿರಂಜನ್ ರಾವ್ ವಹಿಸಿದ್ದರು. ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ.ರಮಾದೇವಿ ಜಿ. ಸ್ವಾಗತಿಸಿದರು. ಮುಖ್ಯ ವೈದ್ಯಾಧಿ ಕಾರಿ ಡಾ.ಮಮತಾ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಅಧ್ಯಯನ ಕೇಂದ್ರದ ಸಹಾಯಕ ಡೀನ್ ಡಾ.ನಾಗರಾಜ್ ಎಸ್., ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ವೀಣಾ ಮಯ್ಯ, ಡಾ.ಸುಚೇತ ಕುಮಾರಿ, ಡಾ.ವಿದ್ಯಾ ಬಲ್ಲಾಳ್, ಸಹಾಯಕ ಪ್ರಾಧ್ಯಾಪಕರಾದ ಡಾ.ಅರ್ಪಣ ಜೈನ್, ಡಾ.ಸುಮನ್ ಪೌಲ್ ಉಪಸ್ಥಿತರಿದ್ದರು.
ಡಾ. ಸುಚೇತ ಕುಮಾರಿ ವಂದಿಸಿದರು. ಕಾರ್ಯಾಗಾರದಲ್ಲಿ ದೇಶದ ವಿವಿಧ ಬಾಗಗಳಿಂದ 70ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವೈದ್ಯರು ಭಾಗವಹಿಸಿದ್ದರು. ಡಾ.ಶ್ಯಾಮಲ ಗುರುವರೆ, ಡಾ.ಜಯರಾಮನ್ ನಂಬಿ ಯಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಬಾಗದ ಮುಖ್ಯಸ್ಥೆ ಡಾ.ಶೋಭ ನಾಡಗೌಡ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಡಾ.ಜಯರಾಮನ್ ನಂಬಿಯಾರ್ ಬಹುಮಾನ ವಿತರಿಸಿದರು.
ಡಾ.ರಮಾದೇವಿ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿದ್ಯಾ ಬಲ್ಲಾಳ್ ಸ್ವಾಗತಿಸಿದರು. ಡಾ.ಅರ್ಪಣಾ ವಂದಿಸಿದರು. ಡಾ.ಅಮೃತಾ, ಡಾ. ಧರಿತ್ರಿ ಕಾರ್ಯಕ್ರಮ ನಿರೂಪಿಸಿದರು.







