ಅಪರಿಚಿತನ ಮೃತದೇಹ ಪತ್ತೆ
ಮಂಗಳೂರು, ಮಾ.13: ನಗರದ ನೆಹರೂ ಮೈದಾನದ ಬಳಿ ಸುಮಾರು 45ರಿಂದ 50 ವರ್ಷ ಪ್ರಾಯದ 5.5 ಅಡಿ ಎತ್ತರದ ಅಪರಿಚಿತ ಗಂಡಸಿನ ಮೃತದೇಹ ಗುರುವಾರ ಪತ್ತೆಯಾಗಿದೆ. ಸಾಧಾರಣ ಮೈ ಕಟ್ಟು ಹೊಂದಿರುವ ದುಂಡು ಮುಖದ, ಕುರುಚಲು ಬಿಳಿ ಗಡ್ಡದ ಈ ವ್ಯಕ್ತಿ ಹಸಿರು ಬಣ್ಣದ ಟೀ ಶರ್ಟ್ ಮತ್ತು ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಈ ವ್ಯಕ್ತಿಯ ವಾರಸುದಾರರಿದ್ದಲ್ಲಿ ಪಾಂಡೇಶ್ವರ (0824-2220518)ಪೊಲೀಸರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





