ಸಹ್ಯಾದ್ರಿ: ಕೊರೋನ ಸೋಂಕು ತಡೆಗೆ ಜಾಗೃತಿ

ಮಂಗಳೂರು, ಮಾ.13: ಕೊರೊನಾ ವೈರಸ್ ಏಕಾಏಕಿ ಜಾಗತಿಕ ಭೀತಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಕೊರೊನಾವೈರಸ್ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿ ಸಲಹೆಗಾರ ಮತ್ತು ಆರೋಗ್ಯ ಕೇಂದ್ರದ ಉಸ್ತುವಾರಿ ಅಂಕಿತ್ ಎಸ್. ಕುಮಾರ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸೋಂಕು, ರೋಗಶಾಸ್ತ್ರ, ತಡೆಗಟ್ಟುವಿಕೆ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಕೊರೋನ ಸೋಂಕಿಗೆ ಸಂಬಂಧಿಸಿದ ನೈಜ ಮತ್ತು ನಕಲಿ ಸುದ್ದಿಗಳ ನಡುವೆ ವ್ಯತ್ಯಾಸವನ್ನು ತೋರಿಸಿದರು. ಸೋಂಕು ಹರಡುವುದನ್ನು ತಡೆಯಲು ವಿದ್ಯಾರ್ಥಿಗಳಿಗೆ ಸುರಕ್ಷಿತ ಕೈ ತೊಳೆಯುವ ತಂತ್ರಗಳನ್ನು ಅವರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
Next Story




.jpg)
.jpg)

